ಬಾಲಿವುಡ್ (Bollywood) ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರು ಇತ್ತೀಚಿಗೆ ನೆಗೆಟಿವ್ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಅವರ ಮಾಜಿ ಪತ್ನಿ ಆಲಿಯಾ ಸಿದ್ಧಿಕಿ (Aaliya Siddiqui) ಮತ್ತು ಸಹೋದರ ಶಾಮಸ್ ನವಾಬ್ ಸಿದ್ದಿಕಿ ಅವರ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದಾರೆ. ಕೊನೆಗೆ ನವಾಜುದ್ದೀನ್ ಈ ಬಗ್ಗೆ ಬಹಿರಂಗ ಪತ್ರಿಕಾ ಹೇಳಿಕೆಯನ್ನು ಕೂಡ ರಿಲೀಸ್ ಮಾಡಿದ್ದಾರೆ. ಮಾಜಿ ಪತ್ನಿ ಆಲಿಯಾ ಮತ್ತು ಸಹೋದರ (Brother) ಶಾಮಸ್ ನವಾಬ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನೂ ಓದಿ: ದುಬಾರಿ ಸೀರೆಯುಟ್ಟು `ಶಾಕುಂತಲಂ’ ಪ್ರಚಾರದಲ್ಲಿ ಭಾಗಿಯಾದ ಸಮಂತಾ
ದಿನದಿಂದ ದಿನಕ್ಕೆ ನವಾಜುದ್ದೀನ್ ಮನೆಗೆ ರಂಪಾಟ ಹಲವು ತಿರುವುಗಳನ್ನ ಪಡೆಯುತ್ತಿದೆ. ಇದೀಗ ಮಾಜಿ ಪತ್ನಿ ಆಲಿಯಾ ಮತ್ತು ಸೋದರ ಶಮಸ್ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯನ್ನು ನಟ ನವಾಜುದ್ದೀನ್ ಸಿದ್ದಿಕಿ ಹೂಡಿದ್ದು, ಮಾರ್ಚ್ 30ರಂದು ಬಾಂಬೆ ಹೈಕೋರ್ಟ್‌ನಲ್ಲಿ ಈ ಕೇಸ್‌ನ ವಿಚಾರಣೆ ನಡೆಯಲಿದೆ. ತನ್ನ ಸಹೋದರ ನವಾಜುದ್ದೀನ್ ಸಿದ್ದಿಕಿ ಅವರಿಗೆ 2018ರಿಂದಲೂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಸಹೋದರನಿಗೆ ನವಾಜುದ್ದೀನ್ ಕ್ರೆಡಿಟ್ ಕಾರ್ಡ್ಸ್, ಎಟಿಎಂ ಕಾರ್ಡ್ಸ್, ಬ್ಯಾಂಕ್ ಪಾಸ್‌ವರ್ಡ್ಸ್ ನೀಡಿದ್ದರು. ಇದನ್ನೆಲ್ಲಾ ಆತ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ನವಾಜುದ್ದೀನ್ ಆರೋಪಿಸಿದ್ದಾರೆ.
ನನ್ನ ಪತ್ನಿ ಆಲಿಯಾ ನನ್ನ ವಿರುದ್ಧ ನಿಲ್ಲುವಂತೆ ಶಮಸ್ ಎತ್ತಿ ಕಟ್ಟಿದ್ದಾನೆ ಎಂದಿದ್ದಾರೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆಲಿಯಾಗೆ ಪ್ರತಿ ತಿಂಗಳು 10 ಲಕ್ಷ ರೂ. ನೀಡಲಾಗುತ್ತಿತ್ತು ಹಾಗೂ ಪ್ರೊಡಕ್ಷನ್ ಹೌಸ್ ಆರಂಭಿಸಲು 2.50 ಕೋಟಿ ರೂ. ನೀಡಲಾಗಿತ್ತು. ಆದರೆ ಈ ಹಣವನ್ನೆಲ್ಲ ಅವರು ತಮ್ಮ ಸ್ವಂತಕ್ಕೆ ಬಳಸಿದ್ದಾರೆ ಎಂದು ನಟ ಆರೋಪಿಸಿದ್ದಾರೆ.
ಇದಲ್ಲದೆ, 2020ರಲ್ಲಿ ಮ್ಯಾನೇಜರ್ ಹುದ್ದೆಯಿಂದ ಶಮಾಸ್‌ರನ್ನು ತೆಗೆದ ನಂತರ ನವಾಜುದ್ದೀನ್ ಅವರು ಆದಾಯ ತೆರಿಗೆ, ಜಿಎಸ್‌ಟಿ ಮತ್ತು ಇತರ ಸರ್ಕಾರಿ ಇಲಾಖೆಗಳಿಂದ 37 ಕೋಟಿ ರೂಪಾಯಿ ತೆರಿಗೆ ಪಾವತಿಸದ ಕಾರಣಕ್ಕಾಗಿ ಕಾನೂನು ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ನವಾಜುದ್ದೀನ್ ಅವರು ಅರ್ಜಿಯಲ್ಲಿ ಹೇಳಿದ್ದು, 100 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶಿಸುವಂತೆ ನವಾಜುದ್ದೀನ್ ಸಿದ್ದಿಕಿ ಕೋರಿದ್ದಾರೆ.