ಮಾನ್ವಿತಾ ನಟನೆಯ ‘ಒನ್ ಅಂಡ್ ಆಫ್’ ಚಿತ್ರದ ಫಸ್ಟ್‌ ಲುಕ್‌ ಔಟ್‌

Public TV
2 Min Read
manvitha kamath

ನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಯುವ ಸಿನಿಮೋತ್ಸಾಹಿಗಳು ವಿಭಿನ್ನ ಬಗೆಯ ಕಥಾಹಂದರದ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಸಿನಿಮಾವೇ ಒನ್ ಅಂಡ್ ಆಫ್.

manvitha

ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಸ್ ಚಿಂಗಾ ‘ಒನ್ ಅಂಡ್ ಆಫ್’ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಶ್ರೇಯಸ್ ಅಭಿನಯಿಸ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋಸ್ ನಲ್ಲಿ ಸುಲಕ್ಷ್ಮೀ ಫಿಲಂಸ್ ನಿರ್ಮಾಣದ ಸಂಸ್ಥೆ ಲೋಗೋ ಹಾಗೂ ಒನ್ ಅಂಡ್ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಲಾಯಿತು. ಈ ವೇಳೆ ಇಡೀ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

manvitha kamath 1

ನಟ ಕಂ ನಿರ್ದೇಶಕ ಶ್ರೇಯಸ್ ಚಿಂಗಾ ಮಾತನಾಡಿ, ಕಂಪ್ಲೀಟ್ ಕಾಮಿಡಿ ಸಿನಿಮಾ. ಇವತ್ತಿನಿಂದ ಶೂಟಿಂಗ್ ಶುರುವಾಗಿದೆ. ಐಟಿ ಕಂಪನಿ ಅಂದ್ಮೇಲೆ ಸಾಕಷ್ಟು ಜನ ಹುಡುಗಿಯರು ಇರುತ್ತಾರೆ. ಮಾನ್ವಿತಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು, ಗೋವಾ ಭಾಗದಲ್ಲಿ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಮಣಿಕಾಂತ್ ಕದ್ರಿ ಸರ್ ಸಂಗೀತ ಸಿನಿಮಾಕ್ಕಿದೆ ಎಂದರು. ಇದನ್ನೂ ಓದಿ:ಸಂಗೀತಾ ಜೊತೆ ನಮ್ರತಾ ಫ್ರೆಂಡ್‌ಶಿಪ್-‌ ಸ್ನೇಹಿತ್‌ ಕಿಡಿ

manvitha

ಮಾನ್ವಿತಾ ಹರೀಶ್ (Manvitha Kamath) ಮಾತನಾಡಿ, ಈ ಸಿನಿಮಾ ಮಾಡಲು ತುಂಬಾ ಕಾರಣಗಳಿವೆ. ಶ್ರೇಯಸ್ ಹೇಳಿದ ಕಥೆ ಇಷ್ಟವಾಯ್ತು. ಶ್ರೇಯಸ್ ಒಳ್ಳೆ ನಟ. ಒಳ್ಳೆ ಬರಹಗಾರ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವ ಅನುಭವ. ನನ್ನ ಪಾತ್ರದ ಹೆಸರು ನಿಧಿ. ನಿಧಿ ಟ್ರಬಲ್ ಮೇಕರ್. ಒಂದೊಳ್ಳೆ ಪಾತ್ರ ಎಂದು ತಿಳಿಸಿದರು. ನಿರ್ಮಾಪಕ ಚರಣ್ ಸುಬ್ಬಯ್ಯ, ಸುಲಕ್ಷ್ಮೀ ಫಿಲ್ಮಂಸ್ ಅಂತಾ ಯಾಕೆ ಇಟ್ಟಿದೆ ಅಂದರೆ ಸು-ಸುಬ್ಬಯ್ಯ ನಮ್ಮ ತಾತ, ಲಕ್ಷ್ಮೀ-ಅಜ್ಜಿ ನಮ್ಮ ಮನೆ ಹೆಸರು ಸುಲಕ್ಷ್ಮೀ. ಹೀಗಾಗಿ ನಮ್ಮ ಪ್ರೊಡಕ್ಷನ್ ಹೌಸ್‌ಗೆ ಈ ಹೆಸರಿಟ್ಟಿದ್ದೇವೆ. ನಾನು ನಿರ್ಮಾಪಕನಾಗಿ ಆಗಿದ್ದೇನೆ ಅನ್ನುವುದಕ್ಕೆ ಹೆಮ್ಮೆಯಾಗುತ್ತಿದೆ. ನಾನು ಒಬ್ಬ ಚಿತ್ರನಟ. ರಂಗ್ಬಿರಂಗಿ ನಟಿಸಿದ್ದೇನೆ. ಅಂದೇ ನಾನು ಹೇಳಿದ್ದೇ ನಾನು ನಿರ್ಮಾಪಕನಾಗುತ್ತೇನೆ ಎಂದಿದ್ದೆ ಎಂದರು.

manvithaಶ್ರೇಯಸ್ ಚಿಂಗಾ (Shreyas Chinga) ನಾಯಕನಾಗಿ ನಟಿಸ್ತಿದ್ದು, ಮಾನ್ವಿತಾ ಹರೀಶ್ ಕಾಮತ್ ಮುಖ್ಯಭೂಮಿಕೆಯಲ್ಲಿ, ಸಾಧು ಕೋಕಿಲಾ, ಅನಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದರ‍್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ನ.24ಕ್ಕೆ ಕನ್ನಡದಲ್ಲಿ ಮತ್ತೆ 5 ಸಿನಿಮಾಗಳು ರಿಲೀಸ್

ವಿಶೇಷ ಅಂದರೆ ಸಿನಿಮಾದಲ್ಲಿ ಹೀರೋಗೆ ಕನ್ನಡ ಎಂಬ ಹೆಸರಿಡಲಾಗಿದೆ. ದೇವೇಂದ್ರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ‘ಒನ್ ಅಂಡ್ ಆಫ್’ (One And Half) ಸಿನಿಮಾಕ್ಕಿದೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಹೊಂದಿರುವ ‘ಒನ್ ಅಂಡ್ ಆಫ್’ ಸಿನಿಮಾವನ್ನು ಸುಲಕ್ಷ್ಮೀ ಫಿಲಂಸ್ ನಡಿ ಚರಣ್ ಸುಬ್ಬಯ್ಯ ನಿರ್ಮಾಣ ಮಾಡುತ್ತಿದ್ದಾರೆ.

Share This Article