ಟಾಲಿವುಡ್ ಬಹುಮುಖ ಪ್ರತಿಭೆ ಲಕ್ಷ್ಮಿ ಮಂಚು (Lakshmi Manchu) ಸದ್ಯ ‘ಆದಿಪರ್ವ’ (Adiparva) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ಕೂಡ ಅಭಿಮಾನಿಗಳ ಸೆಳೆದಿದೆ. ಇದೀಗ ಸಿನಿಮಾ ಪ್ರಚಾರ ಕಾರ್ಯಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ. ಈ ವೇಳೆ, ಏಕಾಏಕಿ ಲಕ್ಷ್ಮಿ ಮಂಚು ಕಾಲಿಗೆ ಅಭಿಮಾನಿಯೊಬ್ಬ ನಮಸ್ಕರಿಸಿದ್ದಾರೆ. ಅಭಿಮಾನಿಯ ವರ್ತನೆ ಕಂಡು ನಟಿ ಶಾಕ್ ಆಗಿದ್ದಾರೆ.
ಆದಿಪರ್ವ ಸಿನಿಮಾದಲ್ಲಿ ಲಕ್ಷ್ಮಿ ಮಂಚು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ದೈವಿಕ ಕಥೆ ಇದಾಗಿದ್ದು, ಇಡೀ ಸಿನಿಮಾ ಅವರ ಪಾತ್ರದ ಸುತ್ತ ಸುತ್ತುತ್ತದೆ. ಹೈದರಾಬಾದ್‌ನಲ್ಲಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ‘ಆದಿಪರ್ವ’ ಚಿತ್ರದ ಬಗ್ಗೆ ಮಾತನಾಡಲು ನಟಿ ವೇದಿಕೆ ಹತ್ತಿದ್ದಾರೆ. ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ಅಭಿಮಾನಿ ವೇದಿಕೆಯನ್ನೇರಿದ್ದಾನೆ. ಹಿಂದೆ ಮುಂದೆ ನೋಡದೇ ಸೀದಾ ಲಕ್ಷ್ಮಿ ಮಂಚು ಪಾದಕ್ಕೆ ನಮಸ್ಕಾರ ಮಾಡಿದ್ದಾನೆ. ಈ ವರ್ತನೆಯನ್ನ ನಿರೀಕ್ಷೆ ಮಾಡದ ನಟಿ ಅಭಿಮಾನಿ ಕಾಲಿಗೆ ಬೀಳುತ್ತಿದ್ದಂತೆ ಗಲಿಬಿಲಿಗೊಂಡು ಹಿಂದೆ ಸರಿದಿದ್ದಾರೆ.
Tag that veera abhimani????????#mohanbabu#bloodbath #RCBUnbox #ViratKohli #IPL2024 #IPLonJioCinema #manchulakshmi #KingCharles #bachelor @arunkalyan5 @BheemlaBoy1 @Love_Cinemaa @namasteboo @SRHtruefan2 pic.twitter.com/r5f4PcOhP0
— navvali_anipinchindi (@Rajesh651083361) March 19, 2024
ಆ ನಂತರ ಅವರ ಅಂಗರಕ್ಷಕರು ಬಂದು ಆ ಅಭಿಮಾನಿಯನ್ನ ಮೇಲೆತ್ತಿ ಕೆಳಗಿಳಿಸಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಅಭಿಮಾನಿ ಆ ನಂತರ ಕಣ್ಣೀರನ್ನೂ ಹಾಕಿದ್ದಾನೆ. ಇದನ್ನ ಗಮನಿಸಿರುವ ಮಂಚು ಲಕ್ಷ್ಮೀ ಕಾರ್ಯಕ್ರಮ ಮುಕ್ತಾಯವಾದ ನಂತರ ಅಭಿಮಾನಿಯನ್ನ ಕರೆದು ಫೋಟೋವನ್ನ ಕ್ಲಿಕಿಸಿಕೊಂಡಿದ್ದಾರೆ. ಅಭಿಮಾನಿಯ ವಿವರವನ್ನೂ ಪಡೆದು ಚಿತ್ರದ ವಿಶೇಷ ಪ್ರದರ್ಶನಕ್ಕೆ ಆಹ್ವಾನ ನೀಡೋದಾಗಿ ತಿಳಿಸಿದ್ದಾರೆ.
‘ಆದಿಪರ್ವ’ ಚಿತ್ರದ ಲಕ್ಷ್ಮಿ ಮಂಚು ಲುಕ್ ಕೆಲ ದಿನಗಳ ಹಿಂದೆ ರಿವೀಲ್ ಆಗಿತ್ತು. ನಟಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಈ ಚಿತ್ರದ ಪೋಸ್ಟರ್ ನೋಡಿದ್ರೆ ಸಾಕ್ಷಾತ್ ದೇವಿಯಂತೆಯೇ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ನಟಿಯ ಲುಕ್ ನೋಡುಗರ ಮನಮುಟ್ಟಿದೆ. ಆದಿಪರ್ವ ಸಿನಿಮಾ 5 ಭಾಷೆಗಳಲ್ಲಿ ಏಪ್ರಿಲ್ 5ರಂದು ರಿಲೀಸ್ ಆಗಲಿದೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಮಂತಾ- ನಾಗಚೈತನ್ಯ
‘ಆದಿಪರ್ವ’ ಸಿನಿಮಾವನ್ನ ಸಂಜೀವ ಕುಮಾರ್ ಮೇಗೋಟಿ ಡೈರೆಕ್ಷನ್ ಮಾಡಿದ್ದಾರೆ. ಸೀರಿಯಲ್, ಸಿನಿಮಾ ಅಂತ ಈಗಾಗಲೇ ಇವರು ಕೆಲಸ ಮಾಡಿದ್ದಾರೆ.