ಸ್ಯಾಂಡಲ್‌ವುಡ್ (Sandalwood) ನಟಿ ಮಮತಾ ರಾಹುತ್ (Mamatha Rahuth) ಅವರು ಜುಲೈ 4ರಂದು ಗಂಡು ಮಗುವಿಗೆ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮಮತಾ ಅವರ ಡೆಲಿವರಿ ಆಗಿದ್ದು, ಗಂಡು ಮಗುವಿಗೆ (Baby Boy) ಜನ್ಮ ನೀಡುತ್ತಿದ್ದಂತೆ ರೆಸ್ಟ್ ಮಾಡದೇ ತಮ್ಮ ಮುಂಬರುವ ಸಿನಿಮಾದ ಚಿತ್ರೀಕರಣದಲ್ಲಿ ನಟಿ ಪಾಲ್ಗೊಂಡಿದ್ದಾರೆ. ಸದ್ಯ ನಟಿ ವೀಡಿಯೋ ಮೂಲಕ ಈ ಸುದ್ದಿಯನ್ನ ತಿಳಿಸಿದ್ದಾರೆ.
ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಬೆಳ್ಳಿತೆರೆಯಲ್ಲಿ ಮಿಂಚಿದ ನಟಿ ಮಮತಾ ರಾಹುತ್ ಅವರು ಕಳೆದ ವರ್ಷ ಮೇ 11ರಂದು ಡಾಕ್ಟರ್ ಸುರೇಶ್ (Dr. Suresh) ಜೊತೆ ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮುದ್ದು ಮಗನಿಗೆ ಜನ್ಮ ನೀಡುವ ಮೂಲಕ ಹೊಸ ಅತಿಥಿಯ ಆಗಮನವಾಗಿದೆ. ಇದನ್ನೂ ಓದಿ:ಶಿವಣ್ಣನಿಗೆ ಸಿಎಂ, ಡಿಸಿಎಂ ಸೇರಿದಂತೆ ಹಲವು ಗಣ್ಯರ ಶುಭ ಹಾರೈಕೆ
ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಮಮತಾ, ಸೋಷಿಯಲ್ ಮೀಡಿಯಾದಲ್ಲಿ ನನ್ನ ಪ್ರೆಗ್ನೆನ್ಸಿ ವಿಡಿಯೋಗಳನ್ನು ನೀವು ನೋಡುತ್ತಾ ಇದ್ದೀರಿ ಇವತ್ತು ನನಗೆ ಡೆಲಿವರಿ ಆಗಿದೆ ನನ್ನ ಮಗು ಜೊತೆ ನನ್ನ ಫ್ಯಾಮಿಲಿ ಜೊತೆ ವೀಡಿಯೋ ನೋಡುತ್ತಿದ್ದೀರ. ನಿನ್ನೆ ಸಂಜೆ ನನಗೆ ನಾರ್ಮಲ್ ಡೆಲಿವರಿ ಆಗಿದೆ ಅದು ಸರ್ಕಾರಿ ಆಸ್ಪತ್ರೆಯಲ್ಲಿ. ಯಾವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೂ ಕಡಿಮೆ ಇಲ್ಲ ನಮ್ಮ ಸರ್ಕಾರಿ ಆಸ್ಪತ್ರೆಗಳು, ತುಂಬಾ ಕ್ಲೀನ್ ಆಗಿದೆ ಅಗತ್ಯ ಇರುವ ಎಲ್ಲಾ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ ವೈದ್ಯರು ಮತ್ತು ಸಿಬ್ಬಂದಿಗಳು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಡಾ.ಸವಿತಾ ಮತ್ತು ಅವರ ಟೀಂ ತುಂಬಾ ಕ್ರಿಟಿಕಲ್ ಆಗಿರುವ ಕೇಸ್‌ಗಳನ್ನು ಸುಲಭವಾಗಿ ಹ್ಯಾಂಡಲ್ ಮಾಡಿ ನಾರ್ಮಲ್ ಮಾಡಿಸುತ್ತಾರೆ. ತುಂಬಾ ಟ್ರೈ ಮಾಡಿ ನನಗೆ ನಾರ್ಮಲ್ ಡೆಲಿವರಿ ಮಾಡಿಸಿದರು ಎಂದು ನಟಿ ಮಾತನಾಡಿದ್ದಾರೆ.
ಮಗುವಿಗೆ ಜನ್ಮ ನೀಡಿದ ದಿನವೇ ಮಮತಾ ರಾಹುತ್ (Mamatha Rahuth) ತಾರಿಣಿ (Tharini) ಸಿನಿಮಾ ಚಿತ್ರೀಕರಣಲ್ಲಿ ಭಾಗಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಮಗು ಹುಟ್ಟಿದ ದಿನವೇ ಮೊದಲ ಶಾಟ್ ತೆಗೆದಿದ್ದಾರೆ ಮೇಕಪ್ ಇಲ್ಲದೆ ಮಮತಾ ನೈಜವಾಗಿಯೇ ಕಾಣಿಸಿಕೊಂಡಿದ್ದಾರೆ. ಡೆಲಿವರಿ ನಂತರ ನನ್ನ ಮೊದಲ ಫೋಟೋಗಳಿದು. ತಾರಿಣಿ (Tharini Film) ಸಿನಿಮಾ ಚಿತ್ರೀಕರಣ ನಡೆಯುತ್ತಿದೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಮದುವೆಯ ನಂತರ ನಟನೆಯ ಜೊತೆ ನಿರ್ಮಾಣ ಮಾಡುತ್ತಿದ್ದಾರೆ ಮಮತಾ. ಸದ್ಯದಲ್ಲೇ ತೆರೆಗೆ ಬರಲಿದೆ ತಾರಿಣಿ ಸಿನಿಮಾ.