ನಟಿ ಮಾಳವಿಕಾ ಅವಿನಾಶ್‌ಗೆ ಪಿತೃವಿಯೋಗ

Public TV
1 Min Read
MALAVIKA AVINASH

ಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ (Malavika Avinash) ಅವರ ತಂದೆ ನಟೇಶನ್ ಗಣೇಶನ್ (Nateshan Ganesan) ಅವರು ನಿಧನರಾಗಿದ್ದಾರೆ. ತಂದೆಯ ನಿಧನದ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಳವಿಕಾ ತಂದೆಯ ನಿಧನಕ್ಕೆ ಕುಟುಂಬಸ್ಥರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಶಿವಕಾರ್ತಿಕೇಯನ್‌ಗೆ ರಶ್ಮಿಕಾ ಮಂದಣ್ಣ ಹೀರೋಯಿನ್

ತಂದೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, ಇದನ್ನು ನಾನು 4 ದಿನಗಳ ಹಿಂದೆ ಕ್ಲಿಕ್ಕಿಸಿದ ಫೋಟೋ ಎಂದು ಬರೆದುಕೊಂಡಿದ್ದಾರೆ. ಅವರು ಬ್ಯಾಂಕರ್, ವಕೀಲ, ಬರಹಗಾರ, ನಾಟಕಕಾರ, ಸಾಹಿತ್ಯ ಮತ್ತು ವೇದಗಳಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ವಿದ್ವಾಂಸರಾಗಿದ್ದರು. ಅವರು ನನ್ನ ತಂದೆ ಮಾತ್ರವಲ್ಲ ಗುರು ಕೂಡ ಆಗಿದ್ದರು. ನನ್ನನ್ನು ಮತ್ತು ನನ್ನ ಸಹೋದರಿಯನ್ನು ಸಿಂಹಿಣಿಯಂತೆ ಬೆಳೆಸಿದ್ದರು ಎಂದು ನಟಿ ಭಾವುಕರಾಗಿದ್ದಾರೆ. ನಟೇಶನ್ ಗಣೇಶನ್ ಸದಾ ನಮ್ಮ ಹೃದಯದಲ್ಲಿರುತ್ತಾರೆ ಎಂದು ನಟಿ ಬರೆದುಕೊಂಡಿದ್ದಾರೆ.

ಅಂದಹಾಗೆ, ಅಂತ್ಯಸಂಸ್ಕಾರ ಕಾರ್ಯವು ಇಂದು (ಮೇ 19) ಸಂಜೆ 5 ಗಂಟೆಗೆ ಕೆಂಗೇರಿ, ಬಂಡೇಮಠದ ಹತ್ತಿರ ಇರುವ ಬಿ.ಬಿ.ಎಂ.ಪಿ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article