ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ನೇಹಾ ಮನೆಗೆ ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಪ್ರಥಮ್, ಹರ್ಷಿಕಾ ಪೂಣಚ್ಚ ದಂಪತಿ ಭೇಟಿ ನೀಡಿದ ಬೆನ್ನಲ್ಲೇ ನಟಿ ಮಾಳವಿಕಾ ಅವಿನಾಶ್ (Malavika Avinash) ಕೂಡ ನೇಹಾ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ನೇಹಾ ಪೋಷಕರಾದ ನಿರಂಜನ್ ಹಿರೇಮಠ (Niranjan Hiremath) ದಂಪತಿಯನ್ನು ಭೇಟಿಯಾಗಿ ಪುತ್ರಿ ನೇಹಾ ಹತ್ಯೆಯ ಕುರಿತು ಬೇಸರ ಹೊರಹಾಕಿದ್ದಾರೆ. ನೇಹಾ ಪೋಷಕರ ಬಳಿ ಘಟನೆಯ ಬಗ್ಗೆ ವಿಚಾರಿಸಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶವೇ ಬೆಚ್ಚಿಬೀಳುವಂತಹ ಘಟನೆ ನಮ್ಮ ಹುಬ್ಬಳ್ಳಿಯಲ್ಲಿ ನಡೆದಿದೆ. ಅತ್ಯಂತ ಕ್ರೂರ ರೀತಿಯಲ್ಲಿ ನೇಹಾ ಹಿರೇಮಠ ಕೊಲೆ ಆಗಿದೆ. ಅದು ಕೂಡ ಕಾಲೇಜು ಆವರಣದಲ್ಲಿಯೇ ನಡೆದಿದೆ ಎಂಬುದು ಆತಂಕವನ್ನು ಮೂಡಿಸಿದೆ. ಹೆಣ್ಣು ಮಕ್ಕಳಿಗೆ ಕಾಲೇಜು ಕ್ಯಾಂಪಸ್‌ನಲ್ಲೇ ರಕ್ಷಣೆ ಇಲ್ಲ ಎಂದರೆ ಅವರನ್ನು ಕಾಲೇಜಿಗೆ ಕಳಿಸಲು ಇನ್ಮುಂದೆ ಪೋಷಕರು ಹೇಗೆ ಧೈರ್ಯ ಮಾಡುತ್ತಾರೆ ಎಂದು ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ- ಸಖತ್ ಹಾಟ್ ಎಂದ ನೆಟ್ಟಿಗರು
ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಹೇಳುತ್ತೇನೆ. ಆಗ ಮಾತ್ರ ನ್ಯಾಯ ಸಿಗುತ್ತದೆ. ರಾಜ್ಯ ಸರ್ಕಾರದ ಧೋರಣೆ ಏನು ಎಂಬುದನ್ನು ನೋವು ಈಗಾಗಲೇ ನೋಡಿದ್ದೇವೆ. ಮೊದಲು ಏನೂ ನಡೆದೇ ಇಲ್ಲವೇನೋ ಎಂಬ ರೀತಿಯಲ್ಲಿ ಮಾತನಾಡಿದ್ದರು. ಆಮೇಲೆ ಅವರವರ ವೈಯಕ್ತಿಕ ಸಮಸ್ಯೆ ಎಂದು ವಿಚಾರವನ್ನು ತಳ್ಳಿಹಾಕುವ ಪ್ರಯತ್ನ ಮಾಡಿದರು. ಓಲೈಕೆಗಾಗಿ ಮಾಡುವುದು ಎಷ್ಟು ಸರಿ ಎಂದಿದ್ದಾರೆ. ಅವರು ಮಾಡುವ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ ಎಂದಿದ್ದಾರೆ ಮಾಳವಿಕಾ ಖಡಕ್ ಆಗಿ ಮಾತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.