ಉಡುಪಿ: ಕನ್ನಡ ಚಿತ್ರರಂಗದ ಕನಸಿನ ಕನ್ಯೆ ಮಾಲಾಶ್ರೀ (Malashree), ಉಡುಪಿ ಶ್ರೀಕೃಷ್ಣ ಮಠಕ್ಕೆ (Udupi Sri Krishna Matha) ಶುಕ್ರವಾರ ಭೇಟಿ ನೀಡಿದರು.
ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು. ಮಾಲಾಶ್ರೀ ಜೊತೆ ಪುತ್ರಿ ಆರಾಧನಾ ಕೂಡ ಮಠಕ್ಕೆ ಬಂದಿದ್ದರು. ಇದನ್ನೂ ಓದಿ: ಸಿಎಂ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಆಗುವ ಆಸೆಯಿದೆ: ಸತೀಶ್ ಜಾರಕಿಹೊಳಿ ಇಂಗಿತ
ಈ ಪರ್ಯಾಯದಲ್ಲಿ ಕೋಟಿಬಾರಿ ಭಗವದ್ಗೀತೆಯನ್ನು ಬರೆಯುವ ಕೋಟಿಗೀತಾ ಲೇಖನ ಯಜ್ಞದೀಕ್ಷೆಯನ್ನು ಇಬ್ಬರೂ ಸ್ವೀಕರಿಸಿದರು.
ಕಾಟೇರಾ ಸಿನಿಮಾದ ಸಕ್ಸಸ್ ನಂತರ ನಟಿ ಆರಾಧನಾ ಚಿತ್ರರಂಗದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಕಾಟೇರಾ ಸಿನಿಮಾದಲ್ಲಿ ನಟ ದರ್ಶನ್ ಜೊತೆಗೆ ನಾಯಕಿಯಾಗಿ ಆರಾಧನಾ ನಟಿಸಿದ್ದರು. ಇದನ್ನೂ ಓದಿ: ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ – ಯತ್ನಾಳ್ ಟಾಂಗ್