ಬಾಲಿವುಡ್ ಬೆಡಗಿ ಮಲೈಕಾ ಅರೋರಾ (Malaika Arora) ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಅರ್ಜುನ್ ಕಪೂರ್ (Arjun Kapoor) ಜೊತೆಗಿನ ಬ್ರೇಕಪ್ (Breakup) ವಿಚಾರವಾಗಿ ಭಾರೀ ಟೀಕೆ, ಟ್ರೋಲ್‌ಗಳನ್ನು ನಟಿ ಎದುರಿಸುತ್ತಿದ್ದಾರೆ. ಇದೀಗ ಬ್ರೇಕಪ್ ವಿಚಾರಕ್ಕೆ ಟೀಕಿಸುವವರಿಗೆ ಮಲೈಕಾ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಜೈಲಿನಲ್ಲಿರೋ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಪ್ರೊಡ್ಯೂಸರ್‌ಗೆ ಬೆದರಿಕೆ ಕೇಸ್‌ಗೆ ಮರುಜೀವ
ಸಂದರ್ಶನವೊಂದರಲ್ಲಿ ಮಲೈಕಾ ಮೊದಲ ಬಾರಿಗೆ ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದಿದ್ದಾರೆ. ನಾನು ತೆಗೆದುಕೊಂಡಿರುವ ನಿರ್ಧಾರಕ್ಕೆ ಯಾವುದೇ ವಿಷಾದವಿಲ್ಲದೇ ಬದುಕುತ್ತೇನೆ ಹೊರತು ಕೊರಗುವುದಿಲ್ಲ. ಇಂದು ಏನಾದರೂ ಕಲಿತಿದ್ದೀನಿ ಎಂದಾದರೆ ಅದಕ್ಕೆ ಜೀವನದುದ್ದಕ್ಕೂ ನಾನು ಪಡೆದ ಅನುಭವಗಳೇ ಕಾರಣ. ಇದೆಲ್ಲದರಿಂದಲೇ ಇಂದು ಒಂದೊಳ್ಳೆಯ ಜೀವನವನ್ನು ರೂಪಿಸಿಕೊಂಡಿದ್ದೇನೆ ಎಂದಿದ್ದಾರೆ.
ಇನ್ನೂ ನಾನು ನೋವಿನಿಂದ ಹೊರಬರಲು ಕರೀನಾ ಕಪೂರ್ ಖಾನ್, ಕರೀಷ್ಮಾ ಕಪೂರ್ ಮತ್ತು ಸಹೋದರಿ ಅಮೃತಾ ಅರೋರಾ ಅವರೆಲ್ಲರ ಪಾತ್ರ ಸಾಕಷ್ಟಿದೆ. ಅವರಿಲ್ಲದೆ ನಾನಿಲ್ಲ. ಇಲ್ಲಿಯವರೆಗೂ ನಾನು ಕೈಗೊಂಡ ನಿರ್ಧಾರ ನನ್ನ ಜೀವನವನ್ನು ಉತ್ತಮವಾಗಿ ರೂಪಿಸಿದೆ. ಈ ವಿಷಯದಲ್ಲಿ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಟೀಕಿಸುವವರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ ಮಲೈಕಾ.