ತಮಿಳಿನ ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮೀ ಮದುವೆ ಆಗುವ ಮೂಲಕ ನಿನ್ನೆ ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಆದರೆ, ಅದನ್ನು ಸಂಭ್ರಮಿಸೋಕೆ ರೆಡಿಯಾಗಿಲ್ಲ ಅಭಿಮಾನಿಗಳು. ಕಾರಣ ಮಹಾಲಕ್ಷ್ಮೀ ಆಯ್ಕೆ ಮಾಡಿಕೊಂಡ ಹುಡುಗ. ತಮಿಳಿನ ಶ್ರೀಮಂತ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಜೊತೆ ನಿನ್ನೆ ಬೆಳಿಗ್ಗೆ ಹೊಸ ಜೀವನಕ್ಕೆ ಕಾಲಿಟ್ಟಿರುವ ಮಹಾಲಕ್ಷ್ಮಿ, ಆ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಹುಡುಗನ ಕಂಡು ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.
Advertisement
ಪ್ರೀತಿ ಕುರುಡು ನಿಜ. ಹಾಗಂತ ಮಹಾಲಕ್ಷ್ಮೀ ಅಭಿಮಾನಿಗಳು ಒಪ್ಪಿಕೊಳ್ಳುತ್ತಿಲ್ಲ. ಕಾರಣ ರವೀಂದ್ರ ಅವರ ಧಡೂತಿ ದೇಹ. ಮಹಾಲಕ್ಷ್ಮಿ ಗುಬ್ಬಚ್ಚಿ ಮರಿಯಂತೆ ಕಂಡರೆ, ರವೀಂದ್ರ ನಟಿಗಿಂತೂ ಮೂರ್ನಾಲ್ಕು ಪಟ್ಟ ದಪ್ಪ ಇದ್ದಾರೆ. ಹಾಗಾಗಿ ಇದು ನಿಜವಾಗಿಯೂ ನಡೆದ ಮದುವೆನಾ? ಅಥವಾ ಸೀರಿಯಲ್ ದೃಶ್ಯನಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಪ್ರೀತಿಗೆ ಎಲ್ಲವನ್ನೂ ತಡೆದುಕೊಳ್ಳುವ ಶಕ್ತಿ ಇದೆ ಎಂದು ಹಲವರು ಹಾರೈಸಿದ್ದಾರೆ. ಇದನ್ನೂ ಓದಿ:ಮ್ಯೂಸಿಕಲ್ ಲವ್ ಸ್ಟೋರಿಗೆ ನಾಯಕಿಯಾದ ಮೇಘಶ್ರೀ
Advertisement
Advertisement
ಇದು ಇಬ್ಬರಿಗೂ ಎರಡನೇ ಮದುವೆ. ಮಹಾಲಕ್ಷ್ಮೀಗೆ ಒಂದು ಮಗು ಕೂಡ ಇದೆ. ಇದೆಲ್ಲವನ್ನೂ ರವೀಂದ್ರ ಒಪ್ಪಿಕೊಂಡಿದ್ದರೆ, ರವೀಂದ್ರ ಅವರ ಎಲ್ಲ ವಿಚಾರವನ್ನೂ ತಿಳಿದುಕೊಂಡು ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಖುಷಿಯಿಂದ ಇರುವ ಹೊತ್ತಿನಲ್ಲಿ ‘ನಟಿಯು ಹಣಕ್ಕಾಗಿ ಆತನನ್ನು ಮದುವೆಯಾಗಿದ್ದಾರೆ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಏನೇ ಇರಲಿ, ಇಬ್ಬರೂ ಇಷ್ಟಪಟ್ಟು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸೋಣ.