ತೆಲುಗು ನಟ ಬಾಲಯ್ಯ(Balayya) ಎಕ್ಸ್‌ಪ್ರೆಸ್ಸಿವ್ ಮತ್ತು ಅಗ್ರೆಸ್ಸಿವ್ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರವೇ. ಆದರೆ ಮೊನ್ನೆ ಮೊನ್ನೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಆಂಧ್ರಪ್ರದೇಶದ ಹಿಂದುಪುರಂ ಶಾಸಕ- ನಟ ಅಗ್ರೆಸ್ಸಿವ್ ಆಗಿ ವರ್ತಿಸಿ ಓರ್ವ ನಟಿಯಿಂದ ಟೀಕೆಗೆ ಒಳಗಾಗಿದ್ದಾರೆ. ಆ ನಟಿ ಮಾಧವಿ, ಬಾಲಯ್ಯ ವಿಧಾನಸಭೆಯಲ್ಲಿ ರೌಡಿಯಂತೆ ವರ್ತಿಸಿದ್ದಾರೆ ಎಂದಿದ್ದಾರೆ. ನಟಿಯ ಹೇಳಿಕೆ ಬಾಲಯ್ಯ ಫ್ಯಾನ್ಸ್ ಕಿಡಿಕಾರಿದ್ದಾರೆ.
60ರಲ್ಲೂ ಸೂಪರ್ ಸ್ಟಾರ್ ನಂದಿಮೂರಿ ಬಾಲಕೃಷ್ಣ. ನಟರಾಗಿಯೂ ಜನಪ್ರತಿನಿಧಿಯಾಗಿಯೂ ಗುರುತಿಸಿಕೊಂಡಿರೋ ಬಾಲಯ್ಯ ಆಂಧ್ರದಲ್ಲಿ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ಲೀಡರ್. ನಡೆ ನುಡಿ ವಿಚಾರದಲ್ಲಿ ಬಾಲಯ್ಯ ಮೇಲೆ ಟೀಕೆ ಟಿಪ್ಪಣಿ ಇದ್ದಿದ್ದೇ, ಆದರೆ ಬಾಲಯ್ಯ ಎಲ್ಲದಕ್ಕೂ ಡೋಂಟ್‌ಕೇರ್ ಗುಣದವರು. ಆದ್ರೀಗ ಬಾಲಯ್ಯ ವಿದಾನಸಭೆಯಲ್ಲಿ ಗುಡುಗಿರುವ ವಿಚಾರ ಅವರನ್ನ ರೌಡಿಗೆ ಹೋಲಿಸುವಂತೆ ಆಗಿದೆ. ನಟಿ ಮಾಧವಿ ಲತಾ (Madhavi Latha), ಬಾಲಯ್ಯರನ್ನ ರೌಡಿ ಎಂದಿದ್ದಾರೆ.
ನಟಿಯಾಗಿ ಬಿಜೆಪಿ (Bjp) ಪಕ್ಷದಲ್ಲೂ ಗುರುತಿಸಿಕೊಂಡಿರೋ ಮಾಧವಿ ಲತಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬಾಲಯ್ಯರ ಅಗ್ರೆಸ್ಸಿವ್ ಭಾಷಣದ ಝಲಕ್ಕನ್ನ ಹಂಚಿಕೊಂಡು ಆಂಧ್ರದ ಜನ ರೌಡಿಯನ್ನೇ ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ಅಷ್ಟಕ್ಕೂ ಮಾಧವಿ ಲತಾ (Madhavi Latha) ಹೀಗೆ ಹೇಳುವುದಕ್ಕೆ ಕಾರಣ ಹಿಂದುಪುರಂ ಶಾಸಕರಾಗಿರೋ ಬಾಲಯ್ಯ ಇತ್ತೀಚೆಗೆ ವಿಧಾನಸಭೆಯಲ್ಲಿ ಭಾಗಿಯಾಗಿ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಆಕ್ರೋಶ ಹೊರಹಾಕಿ ಗದ್ದಲ ಮಾಡಿದ್ರು. ಇದನ್ನೇ ನಟಿ ಮಾಧವಿ ಪೋಸ್ಟ್ ಮಾಡಿ ಆಂಧ್ರದ ಜನ ರೌಡಿಗಳನ್ನ ಆಯ್ಕೆಮಾಡಿದ್ದಾರೆ. ಕ್ಷಮಿಸಿಬಿಡಿ ಅವರನ್ನ ಎಂಎಲ್‌ಎ ಎಂದೂ ಕರೆಯುತ್ತಾರೆ ಎಂದು ಬರೆದಿದ್ದಾರೆ. ಮಾಧವಿ ಲತಾ ಈ ಹೇಳಿಕೆ ಬಾಲಯ್ಯ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ಮಾಧವಿ ಕ್ಷಮಾಪಣೆ ಕೇಳ್ತಾರ? ಪರಿಸ್ಥಿತಿ ಎದುರಿಸುತ್ತಾರಾ ಎಂದು ಕಾಯಬೇಕಿದೆ.