ರಣಧೀರ, ಹೃದಯ ಗೀತೆ, ಮ್ಯಾಜಿಕ್ ಅಜ್ಜಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಖುಷ್ಬೂ (Kushboo Sundar) ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತೆಗೆ ದಾಖಲಾಗಿರುವ ನಟಿ, ಬೆಡ್ ಮಲಗಿರುವ ಫೋಟೋವನ್ನ ಶೇರ್ ಮಾಡಿ ತಮ್ಮ ಆರೋಗ್ಯದ (Health) ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬರ್ತ್‌ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಪ್ರಜ್ವಲ್ ದೇವರಾಜ್ ವಿಶೇಷ ಮನವಿ
ಸದ್ಯ ಅನಾರೋಗ್ಯದ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುವುದರ ಬಗ್ಗೆ ಟ್ವೀಟ್ ಮಾಡಿರುವ ನಟಿ ಖುಷ್ಬೂ, ಟೇಲ್ ಬೋನ್ ಚಿಕಿತ್ಸೆ ಪಡೆಯುವುದರ ಸಲುವಾಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಈ ಸಮಸ್ಯೆ ಖುಷ್ಬೂ ಅವರನ್ನು ಬಾಧಿಸಿತ್ತು. ಇದೀಗ ಅದೇ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಮತ್ತೆ ಚಿಕಿತ್ಸೆ ಮುಂದುವರಿಸಿದ್ದಾರೆ.
On the road to recovery! Underwent a procedure for my coccyx bone ( tail bone ) yet again. Hope it heals completely. ???? pic.twitter.com/07GlQxobOI
— KhushbuSundar (@khushsundar) June 23, 2023
ನಾನೀಗ ಚೇತರಿಕೆಯ ಹಂತದಲ್ಲಿದ್ದೇನೆ. ಕೋಕ್ಸಿಕ್ಸ್ ಅಥವಾ ಟೇಲ್ ಮೂಳೆ ಚಿಕಿತ್ಸೆಯ ಸಲುವಾಗಿ ನಾನು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ಹಿಂದೆಯೂ ಈ ಸಮಸ್ಯೆ ಕಾಡಿತ್ತು. ಆದಷ್ಟು ಬೇಗ ಗುಣಮುಖಳಾಗಿ ಹೊರಬರುವೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಅವರ ಅಭಿಮಾನಿಗಳು ಮತ್ತು ಸಿನಿಮಾ ಸ್ನೇಹಿತರು ಟ್ವಿಟ್ ಮಾಡಿ, ಬೇಗ ಗುಣಮುಖರಾಗಿ ಬನ್ನಿ ಎಂದು ಹರಸಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿಯೂ ಖುಷ್ಬೂ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆವತ್ತು ಶಾಕಿಂಗ್ ಎಂಬಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬಂದು ಜ್ವರ, ತಲೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಗ್ಗೆ ಖುಷ್ಬೂ ಹೇಳಿಕೊಂಡಿದ್ದರು. ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.