ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ಖುಷ್ಬೂಗೆ ನೆಟ್ಟಿಗರಿಂದ ತರಾಟೆ

Public TV
1 Min Read
kushboo sundar

ಖ್ಯಾತ ನಟಿ ಖುಷ್ಬೂ (Kushboo Sundar) ಅವರು ಸಿನಿಮಾ- ರಾಜಕೀಯ (Politics) ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಖುಷ್ಬೂ ಅವರು ಮಗಳ ನಡೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮಗಳನ್ನು ಸರಿಯಾಗಿ ಬೆಳೆಸೋಕೆ ಆಗಲ್ವಾ? ಅಂತಾ ಖುಷ್ಬೂಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು.?

kushboo

ನಟಿ ಖುಷ್ಬೂ ಸುಂದರ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆವಂತಿಕಾ (Avantika) ಮತ್ತು ಆನಂದಿತಾ (Ananditha)  ಎಂಬ ಮಕ್ಕಳಿದ್ದಾರೆ. ಇಬ್ಬರೂ ರಾಜಕೀಯ- ಸಿನಿಮಾರಂಗದಿಂದ ದೂರವಿದ್ದಾರೆ. ಇದನ್ನೂ ಓದಿ:ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

avantika sundar

ಇದೀಗ ಆವಂತಿಕಾ ಅವರು ಬೋಲ್ಡ್ ಬಟ್ಟೆ, ಒಳಉಡುಪು ಧರಿಸದೇ ಬಟ್ಟೆ ತೊಟ್ಟಿರೋದು, ಮೈ ಮೇಲೆ ಹಾಕಿಸಿಕೊಂಡಿರುವ ಹಚ್ಚೆ, ಕೂದಲಿಗೆ ಕಲರ್ ಮಾಡಿಸಿರೋದು ಇವೆಲ್ಲವೂ ನೋಡಿ ನಟಿ ಖುಷ್ಬೂಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಖುಷ್ಬೂ ಪುತ್ರಿ ಆವಂತಿಕಾ ತನ್ನ ಬಟ್ಟೆಯ ವಿಷ್ಯವಾಗಿ ಸಖತ್‌ ಟ್ರೋಲ್‌ ಕೂಡ ಆಗ್ತೀದ್ದಾರೆ.

 

View this post on Instagram

 

A post shared by avantika (@avantikasundar)

ನಿಮ್ಮ ಮಗಳ ಬಗ್ಗೆ ನೀವು ಗಮನ ವಹಿಸುತ್ತಿಲ್ಲ, ಮಗಳನ್ನು ಸರಿಯಾಗಿ ಬೆಳೆಸಿಲ್ಲ ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ನೆಟ್ಟಿಗರು ಖುಷ್ಬೂಗೆ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಆವಂತಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ, ನಿಮ್ಮ ಅಮ್ಮನ ಘನತೆಗೆ ಧಕ್ಕೆ ತರುತ್ತಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

Share This Article