ಮತ್ತೆ ಕಿರುತೆರೆ ಮರಳಿದ ʻಬಿಗ್ ಬಾಸ್ʼ ಖ್ಯಾತಿಯ ಕೃತ್ತಿಕಾ ರವೀಂದ್ರ

ಕಿರುತೆರೆಯಲ್ಲಿ ರಾಧೆಯಾಗಿ ಗಮನ ಸೆಳೆದ ಕೃತ್ತಿಕಾ ರವೀಂದ್ರ (Kruttika Ravindra) ಮತ್ತೆ ಟಿವಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ರಾಧಾ ಕಲ್ಯಾಣದ (Radha Kalyana) ರಾಧೆ ಆಗಿ ಮಿಂಚಿದ್ದ ಪ್ರತಿಭಾನ್ವಿತ ನಟಿ ಕೃತ್ತಿಕಾ ಈಗ `ಭೂಮಿಗೆ ಬಂದ ಭಗವಂತ’ ಸೀರಿಯಲ್ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.
View this post on Instagram
ಮಲೆನಾಡಿನ ಸುಂದರಿ ಕೃತ್ತಿಕಾ ರವಿಂದ್ರ `ಪಟ್ರೆ ಲವ್ಸ್ ಪದ್ಮಾ’ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಲಿಫ್ಟ್ ಕೊಡ್ಲಾ, ಕೆಂಗುಲಾಬಿ, ಯಾರಿಗೆ ಯಾರುಂಟು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನೂ ಕೃತ್ತಿಕಾ ಅಂದಾಕ್ಷಣ ಪ್ರೇಕ್ಷಕರಿಗೆ ನೆನಪಾಗೋದು `ರಾಧಾ ಕಲ್ಯಾಣ’ದ ರಾಧೆಯಾಗಿ ಕರ್ನಾಟಕ ಜನತೆಯ ಮನ ಗೆದ್ದಿದ್ದರು.
ರಾಧಾ ಕಲ್ಯಾಣ, ಬಿಗ್ ಬಾಸ್ ರಿಯಾಲಿಟಿ ಶೋ ಬಳಿಕ ಇದೀಗ `ಭೂಮಿಗೆ ಬಂದ ಭಗವಂತ’ ಸೀರಿಯಲ್ ಮೂಲಕ ನಟಿ ಕಿರುತೆರೆಗೆ ಮರಳಿದ್ದಾರೆ. ಈ ಹಿಂದೆ ನಟಿಸಿದ್ದ ರಾಧೆ ಪಾತ್ರಕ್ಕೆ ವಿರುದ್ಧವಾಗಿರುವ ವಿಭಿನ್ನ ಪಾತ್ರದ ಮೂಲಕ ಬರಲಿದ್ದಾರೆ.
`ಭೂಮಿಗೆ ಬಂದ ಭಗವಂತ’ (Bhoomige Banda Bhagawantha) ಸೀರಿಯಲ್‌ನಲ್ಲಿ ಅಪ್ಪಟ ಗೃಹಿಣಿಯಾಗಿ ನಟ ನವೀನ್ ಕೃಷ್ಣ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಕನಸು, ಆಸೆ ಹೊತ್ತಿರುವ ಗೃಹಿಣಿಯಾಗಿ, ದೈವ ಭಕ್ತೆಯ ಪಾತ್ರದಲ್ಲಿ ನಟಿ ಜೀವತುಂಬಲಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಿದ ಸ್ಯಾಂಡಲ್‌ವುಡ್ ನಟ ವಸಿಷ್ಠ ಸಿಂಹ- ಹರಿಪ್ರಿಯಾ
ಅಶ್ವಿನಿ ನಕ್ಷತ್ರ, ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು, ಜೋಡಿಹಕ್ಕಿ ಸೇರಿದಂತೆ ಹಲವು ಹಿಟ್ ಸೀರಿಯಲ್‌ಗಳನ್ನ ನೀಡಿರುವ ಆರೂರು ಜಗದೀಶ್ (Aroor Jagadeesh) ಅವರು ಇದೀಗ `ಭೂಮಿಗೆ ಬಂದ ಭಗವಂತʼ ಧಾರಾವಾಹಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಕೃತ್ತಿಕಾ ಮತ್ತು ನವೀನ್ ಕೃಷ್ಣ (Naveen Krishna) ಕಾಂಬಿನೇಷನ್ ಕಿರುತೆರೆಯಲ್ಲಿ ಆದ್ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.
ಇನ್ನೂ ನಟಿ ಕೃತ್ತಿಕಾ ಮತ್ತು ಶಿವಾನಿ ಸೇರಿ `ಸುಕೃಷಿ ಕ್ರಿಯೇಷನ್ಸ್’ ಎಂಬ ನಿರ್ಮಾಣ ಸಂಸ್ಥೆಯ ಅಡಿ `ಉತ್ತರಾಂಗ’ ಚಿತ್ರವನ್ನು ಕೂಡ ನಿರ್ಮಾಣ ಮಾಡ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಮತ್ತಷ್ಟು ಅಪ್‌ಡೇಟ್ ನೀಡಲಿದ್ದಾರೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k