Bengaluru CityCinemaDistrictsKarnatakaLatestMain PostSandalwood

ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾ

ಸ್ಯಾಂಡಲ್‌ವುಡ್‌ನ (Sandalwood) ಸ್ಟಾರ್ ಜೋಡಿ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ (Haripriya) ಇಂದು (ಜ.26)ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ.

ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾಹಲವು ವರ್ಷಗಳ ಪ್ರೀತಿಗೆ ಇಂದು ಸಿಂಹಪ್ರಿಯ ಜೋಡಿ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಸಿಂಹಪ್ರಿಯ (Simhapriya) ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಪಠಾಣ್ ಹಿಂದಿಕ್ಕಿ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನ ಪಡೆದ ಕನ್ನಡದ ‘ಕಬ್ಜ’

ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾ

ಇತ್ತೀಚಿಗೆಷ್ಟೇ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಇದೀಗ ವಸಿಷ್ಠ ಸಿಂಹ- ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ಸರಳವಾಗಿ ವಿವಾಹವಾಗಿರುವ ಈ ಜೋಡಿ, (ಜ.28)ರಂದು ಸಿನಿಮಾರಂಗದ ಸ್ನೇಹಿತರಿಗೆ ಮತ್ತು ಗಣ್ಯರಿಗೆ ಬೆಂಗಳೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ.

ಚಿತ್ರರಂಗದ ಈ ನವಜೋಡಿಗೆ ಅಭಿಮಾನಿಗಳು, ಸೆಲೆಬ್ರಿಟಿ ಸ್ನೇಹಿತರು ಶುಭಹಾರೈಸುತ್ತಿದ್ದಾರೆ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button