ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ಕೃತಿ ಕರಬಂಧ ಇತ್ತೀಚೆಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡ್ಮೂರು ದಿನಗಳ ಕಾಲ ನಡೆದ ಮದುವೆ ಶಾಸ್ತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡು ಹಸೆಮಣೆ ಏರಿದ್ದಾರೆ. ಅದರಲ್ಲೂ ಅವರು ಹಳದಿ ಶಾಸ್ತ್ರದಲ್ಲಿ ಹಳದಿಯನ್ನೇ ಬಳಸಿಲ್ಲ ಎನ್ನುವುದು ವಿಶೇಷ.
Advertisement
ಸಾಮಾನ್ಯವಾಗಿ ಹಳದಿ ಶಾಸ್ತ್ರದಲ್ಲಿ ಅರಿಶಿನಕ್ಕೆ ಮಹತ್ವ ನೀಡಲಾಗುತ್ತದೆ. ಆದರೆ, ಕೃತಿ ಹಳದಿ (Haladi) ಬದಲು ಮಿಲ್ತಾನಿ ಮಿಟ್ಟಿ ಮಣ್ಣು ಬಳಕೆ ಮಾಡಿ, ಶಾಸ್ತ್ರದಂತೆ ಕೊಂಚ ಅರಿಶಿನ ಮಾತ್ರ ಬೆರೆಸಿದ್ದಾರಂತೆ. ಅದಕ್ಕೆ ಅವರದ್ದೇ ಆದ ಕಾರಣವನ್ನೂ ನೀಡಿದ್ದಾರೆ. ಮಿಲ್ತಾನಿ ಮಿಟ್ಟಿಗೆ ಹೊಳಪಿನ ಗುಣವಿದೆ ಎಂದಿದ್ದಾರೆ.
Advertisement
Advertisement
ಕೃತಿ ಕರಬಂಧ (Kriri Kharbanda) ಅವರು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಮಾರ್ಚ್ 15ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆಯಷ್ಟೇ ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದರು.
Advertisement
ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಕೃತಿ ಕಂಗೊಳಿಸಿದ್ರೆ, ಉಸಿರು ಬಣ್ಣದ ಉಡುಗೆಯಲ್ಲಿ ಪುಲ್ಕಿತ್ ಹೈಲೆಟ್ ಆಗಿದ್ದರು. ನವಜೋಡಿಗೆ ಬಾಲಿವುಡ್ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಕೋರಿದ್ದರು.
ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. mನಿನ್ನೆ ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿದಿದೆ. ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ನಡೆದಿತ್ತು.
ಗ್ರ್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿತ್ತು.