‘ಉಪ್ಪೇನಾ’ ಸಿನಿಮಾದ ಸುಂದರಿ ಕೃತಿ ಶೆಟ್ಟಿ (Krithi Shetty) ಅವರು ಮೂಲತಃ ಮಂಗಳೂರಿನವರು. ತುಳುನಾಡಿನ ಈ ಬೆಡಗಿ ಕೃತಿ ಟಾಲಿವುಡ್ ಅಂಗಳದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಹೀಗಿರುವಾಗ ಈಗ ವಿಷ್ಯವಾಗಿ ಕೃತಿ ಶೆಟ್ಟಿ ಸುದ್ದಿಯಲ್ಲಿದ್ದಾರೆ. ನಟಿಗೆ ಸ್ಟಾರ್ ನಟನ ಮಗನೊಬ್ಬ ಕಿರುಕುಳ ಕೊಡ್ತಿದ್ದಾನೆ ಎಂದು ಸುದ್ದಿ ವೈರಲ್ ಆಗಿದೆ. ಇದರಿಂದ ಕೃತಿಗೆ ಆ ನಟನಿಂದ ಸಂಕಷ್ಟ ಎದುರಾಗಿದೆಯಂತೆ.
ತೆಲುಗಿನ ‘ಉಪ್ಪೇನಾ’ (Uppena) ಸಿನಿಮಾದ ಸಕ್ಸಸ್‌ನಿಂದ ರಾತ್ರೋ ರಾತ್ರಿ ಸ್ಟಾರ್ ಆದ ಯುವನಟಿ ಕೃತಿ ಶೆಟ್ಟಿ ಅವರು ಸಾಕಷ್ಟು ಸ್ಟಾರ್ ನಟರ ಸಿನಿಮಾ ಅವಕಾಶಗಳನ್ನ ಬಾಚಿಕೊಂಡರು. ಆದರೆ ಹೇಳಿಕೊಳ್ಳುವಂತಹ ಬಿಗ್ ಬ್ರೇಕ್ ಸಿಗಲಿಲ್ಲ. ಇತ್ತೀಚಿಗೆ ನಾಗಚೈತನ್ಯ ಜೊತೆ ‘ಕಸ್ಟಡಿ’ (Custody) ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು.


ಇತ್ತೀಚೆಗೆ ಕೃತಿ ಶೆಟ್ಟಿ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರಂತೆ. ಶೂಟಿಂಗ್ ಬಿಟ್ಟು ನನ್ನ ಬರ್ತ್‌ಡೇ ಪಾರ್ಟಿಗೆ ಬಾ, ನಿನಗೆ ಎಷ್ಟು ಕೋಟಿ ಬೇಕಾದರೂ ಕೊಡ್ತೀನಿ ಎಂದು ಆತ ಫೋನ್ ಮಾಡಿ ಕಿರುಕುಳ ನೀಡಿದ್ದಾಗಿ ಆಕೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿದೆ. ಆತ ಯಾರು ಅನ್ನೋದು ಮಾತ್ರ ಆಕೆ ರಿವೀಲ್ ಮಾಡಿಲ್ಲವಂತೆ. ಕೃತಿ ಶೆಟ್ಟಿ ನಾನು ಯಾವುದೇ ಪಾರ್ಟಿಗೆ ಬರಲ್ಲ, ನನಗೆ ಪಾರ್ಟಿಗೆ ಬರೋದು ಇಷ್ಟ ಇಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಸದ್ಯ ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟಾಕ್ಕಿದೆ. ಆತ ಯಾರು? ಯಾವ ಸ್ಟಾರ್ ನಟನ ಮಗ? ಅನ್ನೋದು ಗೊತ್ತಾಗಿಲ್ಲ. ಆತ ತಮಿಳು ಸ್ಟಾರ್ ನಟನ ಮಗನಾ ಅಥವಾ ತೆಲುಗು ನಟನ ಮಗನಾ? ಅಂತೆಲ್ಲಾ ನೆಟ್ಟಿಗರು ಚರ್ಚೆ ಮಾಡ್ತಿದ್ದಾರೆ.


