ಕರಾವಳಿ ನಟಿ ಕೃತಿ ಶೆಟ್ಟಿ (Kriti Shetty) ಅವರು ನಾಗಚೈತನ್ಯಗೆ ನಾಯಕಿಯಾಗಿ ‘ಕಸ್ಟಡಿ’ (Custody) ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು ಸಮಂತಾರಂತೆ ತಾವು ಐಟಂ ಡ್ಯಾನ್ಸ್ ಮಾಡಲ್ಲ ಅಂತಾ ಸಹನಟಿ ಸಮಂತಾಗೆ (Samantha) ಟಕ್ಕರ್ ಕೊಟ್ಟಿದ್ದಾರೆ.
ಒಂದು ಕಾಲದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲೆಂದೇ ನಟಿಯರು ಇದ್ದರು. ಈಗ ಸ್ಟಾರ್ ನಾಯಕಿಯರೇ ಐಟಂ ಹಾಡಿಗೆ ಸೊಂಟ ಬಳುಕಿಸುವ ಮೂಲಕ ಸಕ್ಸಸ್ ಕಂಡಿದ್ದಾರೆ. ತಮನ್ನಾ, ಕರೀನಾ ಕಪೂರ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಸಮಂತಾ ಸೇರಿದಂತೆ ಹಲವು ಐಟಂ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ಇದನ್ನೂ ಓದಿ:ಭದ್ರಾಚಲಂನ ಸೀತಾ ರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ ಪ್ರಭಾಸ್ ದೇಣಿಗೆ
ಇದೀಗ ‘ಕಸ್ಟಡಿ’ ಚಿತ್ರದ ಮೂಲಕ ಸದ್ದು ಮಾಡ್ತಿರುವ ನಾಗಚೈತನ್ಯ ಸಹನಟಿ ಕೃತಿಗೆ ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ಪ್ರಶ್ನೆಯೊಂದು ಎದುರಾಗಿದೆ. ಉ ಅಂಟಾವಾ ಮಾವ ಹಾಡಿನ ಆಫರ್? ನಿಮಗೆ ಸಿಕ್ಕಿದ್ದರೆ ಒಪ್ಪಿಕೊಳ್ಳುತ್ತಿದ್ರಾ ಎಂದು ಕೇಳಿದ್ದಕ್ಕೆ ಕೃತಿ ಶೆಟ್ಟಿ ಅವರು ಇಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ನಾನು ಅಂಥ ಪಾತ್ರ ಒಪ್ಪಿಕೊಳ್ಳಲ್ಲ. ಆ ರೀತಿ ಪಾತ್ರದಲ್ಲಿ ನಟಿಸಲು ನನಗೆ ಕಷ್ಟ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೂ ಕೂಡ ಅವರಿಗೆ ಆ ಹಾಡಿನಲ್ಲಿ ಸಮಂತಾ ಅವರ ಪರ್ಫಾರ್ಮೆನ್ಸ್ ಇಷ್ಟ ಆಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ತಮ್ಮ ಹೀರೋನ ಮಾಜಿ ಪತ್ನಿಯ ಬಗ್ಗೆ ನಟಿ ಕೃತಿ ಶೆಟ್ಟಿ ಧೈರ್ಯವಾಗಿ ಉತ್ತರ ನೀಡಿದ್ದಾರೆ. ಸಮಂತಾರಂತೆ ಐಟಂ ಹಾಡಿಗೆ ಹೆಜ್ಜೆ ಹಾಕಲ್ಲ ಎಂದಿದ್ದಾರೆ.