ಬಾರ್ಬಿ ಡಾಲ್‌ನಂತೆ ಕಂಗೊಳಿಸಿದ ಕಿಯಾರಾ

Public TV
1 Min Read
kiara advani 1

ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ (Kiara Advani) ಅವರು ‘ಸತ್ಯ ಪ್ರೇಮ್ ಕಿ ಕಥಾ’ (Sathya Prem Ki Katha) ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಸಿನಿಮಾದ ಬಳಿಕ ಬಂಪರ್ ಆಫರ್ ಕೂಡ ಗಿಟ್ಟಿಸಿಕೊಳ್ತಿದ್ದಾರೆ. ಹೀಗಿರುವಾಗ ಈವೆಂಟ್‌ವೊಂದರಲ್ಲಿ ಕಿಯಾರಾ ಬಾರ್ಬಿ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಕುರಿತ ಫೋಟೋ- ವೀಡಿಯೋ ಸಖತ್ ಸದ್ದು ಮಾಡುತ್ತಿದೆ.

kiara advani

ಎಮ್.ಎಸ್ ಧೋನಿ, ಕಬೀರ್ ಸಿಂಗ್, ಲಸ್ಟ್ ಸ್ಟೋರಿಸ್, ಕಳಂಕ್, ಗುಡ್ ನ್ಯೂಸ್, ಶೇರ್‌ಷಾ ಸೇರಿದಂತೆ ಬಾಲಿವುಡ್- ಸೌತ್ ಸಿನಿಮಾಗಳಲ್ಲಿ ಕಿಯಾರಾ (Kiara) ಹೀರೋಯಿನ್ ಆಗಿ ನಟಿಸಿದ್ದಾರೆ. ಡಿಮ್ಯಾಂಡ್ ಇರುವಾಗಲೇ ಸ್ಟಾರ್ ನಟ ಸಿದ್ಧಾರ್ಥ್ ಮಲ್ಹೋತ್ರಾ(Siddarth Malhotra)  ಜೊತೆ ಈ ವರ್ಷ ಫೆ.7ಕ್ಕೆ ಹಸೆಮಣೆ ಏರಿದ್ದರು. ಮದುವೆಯಾಯಿತು ಎಂದು ಬ್ರೇಕ್ ತೆಗೆದುಕೊಳ್ಳದೇ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಇದನ್ನೂ ಓದಿ:ಗರುಡ ಪಕ್ಷಿಗೆ ಮುತ್ತಿಟ್ಟ ನಟಿ- ಮರಳುಗಾಡಿನಲ್ಲಿ ದೀಪಿಕಾ ದಾಸ್

kiara

ಹೀಗಿರುವಾಗ ಇತ್ತೀಚಿಗೆ ಫ್ಯಾಷನ್ ಈವೆಂಟ್‌ವೊಂದರಲ್ಲಿ ಕಿಯಾರಾ ರ‍್ಯಾಂಪ್ ವಾಕ್ ಮಾಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ಕಿಯಾರಾ ಬಾರ್ಬಿ ಡಾಲ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ನಟಿಯ ಲುಕ್ ಮತ್ತು ಬ್ಯೂಟಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ರಾಮ್ ಚರಣ್ (Ram Charan) ನಟನೆಯ ಗೇಮ್ ಚೇಂಜರ್ (Game Changer) ಸಿನಿಮಾದಲ್ಲಿ ಕಿಯಾರಾ ನಾಯಕಿಯಾಗಿ ನಟಿಸಿದ್ದಾರೆ. ಮತ್ತೆ ಪತಿ ಸಿದ್ಧಾರ್ಥ್ ಜೊತೆ ಹೊಸ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಫೈನಲ್ ಆಗಿದ್ದಾರೆ. ಹೊಸ ಬಗೆಯ ಕಥೆಗಳನ್ನ ನಟಿ ಕೇಳ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article