ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಅವರು ತಾಯಿ ಆಗುತ್ತಿರುವ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಸಿಹಿಸುದ್ದಿ ಕೊಟ್ಟ ಬೆನ್ನಲ್ಲೇ ಚಿತ್ರೀಕರಣಕ್ಕೆ ನಟಿ ಹಾಜರಿ ಹಾಕಿದ್ದಾರೆ. ಇದನ್ನೂ ಓದಿ:ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ: ಪತ್ನಿ ಬರ್ತ್‌ಡೇಗೆ ರಿಷಬ್ ಲವ್ಲಿ ವಿಶ್
Advertisement
ನಿನ್ನೆಯಷ್ಟೇ (ಫೆ.28) ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಕಿಯಾರಾ ದಂಪತಿ ಘೋಷಿಸಿದ್ದರು. ಈ ಬೆನ್ನಲ್ಲೇ ನಟಿ ಚಿತ್ರೀಕರಣಕ್ಕೆ ಮರಳಿದ್ದಾರೆ. ವ್ಯಾನಿಟಿ ವ್ಯಾನ್ ಬಳಿ ಕಿಯಾರಾ ನಡೆದುಕೊಂಡು ಬರುವ ವೇಳೆ, ನಟಿಯ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿತ್ತು. ಶುಭಹಾರೈಸಿದ ಪಾಪರಾಜಿಗಳಿಗೆ ನಗುತ್ತಾ ಧನ್ಯವಾದ ಹೇಳಿದ್ದಾರೆ.ತಾಯಿ ಆಗುತ್ತಿರುವ ಸಂತಸದ ನಡುವೆಯೂ ಶೂಟಿಂಗ್‌ಗೆ ಮರಳಿರುವ ನಟಿಯ ನಡೆಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
View this post on Instagram
Advertisement
ಇನ್ನೂ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಹಾಗೂ ಕಿಯಾರಾ ಅಡ್ವಾಣಿ ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. 2023ರಲ್ಲಿ ರಾಜಸ್ಥಾನದಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾದರು. ಇದನ್ನೂ ಓದಿ:ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?
Advertisement
View this post on Instagram
ಅಂದಹಾಗೆ, ಕಿಯಾರಾ ಸದ್ಯ ವಾರ್ 2, ಟಾಕ್ಸಿಕ್, ಕರಣ್ ಜೋಹರ್ ನಿರ್ಮಾಣದ ಹೊಸ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಿವೆ.