ಬಾಲಿವುಡ್ (Bollywood) ಸ್ಟಾರ್ ಕಪಲ್ ಸಿದ್- ಕಿಯಾರಾ (Kiara Advani) ಜೋಡಿ ಇತ್ತೀಚಿಗೆ ಮದುವೆಯಾಗುವ ಮೂಲಕ ಗುಡ್ ನ್ಯೂಸ್ ನೀಡಿದ್ದರು. ಸಿನಿಮಾ ಶೂಟಿಂಗ್ ನಡುವೆ ನಟಿ ಕಿಯಾರಾ ಪತಿ ಸಿದ್‌ಗೆ ಕೈಯಾರೇ ಉಪಾಹಾರ (Food) ರೆಡಿ ಮಾಡಿದ್ದಾರೆ. ಇದನ್ನೂ ಓದಿ:ಮದುವೆಯಾಗದೇ ಮಗುವನ್ನು ಪಡೆಯುವ ಆಸೆ ಇತ್ತು- ಸಲ್ಮಾನ್ ಖಾನ್
ಕಿಯಾರಾ ಅಡ್ವಾಣಿ (Kiara Advani) ಬೆಳಗಿನ ಉಪಾಹಾರವನ್ನು ತಮ್ಮ ಕೈಯಾರೇ ಮಾಡಿದ್ದಾರೆ. ಸಾಮಾನ್ಯವಾಗಿ ನಟ- ನಟಿಯರಿಗೆ ಕಾಲಿಗೊಂದು, ಕೈಗೊಂದು ಆಳು ಇರುತ್ತಾರೆ. ಅದೇ ರೀತಿ ಅಡುಗೆ ಮಾಡಲೂ ಶೆಫ್‌ಗಳ ದಂಡೇ ಇರುತ್ತದೆ. ಇದೇ ಕಾರಣಕ್ಕೆ ಏನಾದರೂ ಅಡುಗೆಯನ್ನು ಖುದ್ದು ನಟರೇ ಮಾಡಿದರೆ ಅದು ಸುದ್ದಿಯಾಗುತ್ತದೆ. ಇದೀಗ ಕಿಯಾರಾ ಮಾಡಿರುವ ಉಪಾಹಾರವೂ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಫೋಟೋ ಅವರು ಶೇರ್ ಮಾಡಿಕೊಂಡಿದ್ದು, ನೆಟ್ಟಿಗರು ಕಿಯಾರಾಗೆ ಭೇಷ್ ಎನ್ನುತ್ತಿದ್ದಾರೆ.
ಕಿಯಾರಾ ಅಡ್ವಾಣಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸುಂದರವಾದ ಕಥೆಯನ್ನು ಪೋಸ್ಟ್ ಮಾಡಿದ್ದಾರೆ. ಕಿಯಾರಾ ಅವರು ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಅವರ ಭಾನುವಾರದ ಉಪಾಹಾರವನ್ನು ತೋರಿಸಿದ್ದಾರೆ. ಅದನ್ನು ತಾವೇ ಮಾಡಿರುವುದಾಗಿ ಹೇಳಿದ್ದಾರೆ. ಪತಿಗಾಗಿ ತಾವು ಕೈಯಾರೆ ಈ ಉಪಾಹಾರ ಮಾಡಿರುವುದಾಗಿ ಅವರು ತೋರಿಸಿದ್ದಾರೆ. ದೊಡ್ಡ ಸೂಪರ್‌ಮ್ಯಾನ್ ಬೌಲ್‌ನಲ್ಲಿ ಇರುವ ಆಹಾರವನ್ನು ಶೇರ್ ಮಾಡಲಾಗಿದೆ. ಗಂಡನ ಮೇಲಿನ ಈ ಪ್ರೀತಿ ಸದಾ ಹೀಗೆ ಇರಲಿ ಎಂದು ನೆಟ್ಟಿಗರು ಶುಭ ಹಾರೈಸಿದ್ದಾರೆ.



