ಬಹುಭಾಷಾ ನಟಿ ಖುಷ್ಬೂ (Kushboo Sundar) ಇದೀಗ ಸಂಕಷ್ಟದಲ್ಲಿದ್ದಾರೆ. ಆದರೆ ಆರ್ಥಿಕವಾಗಿ ಅಲ್ಲ, ಹಿರಿಯಣ್ಣ (Brother) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತನ್ನ ಅಣ್ಣನ ಆರೋಗ್ಯದಲ್ಲಿ (Health) ಚೇತರಿಕೆ ಕಾಣಲಿ, ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ನಟಿ ಕೋರಿಕೆಯಿಟ್ಟಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ವಿವಾದ: ಪ್ರಶಾಂತ್ ಸಂಬರಗಿ ಎಂಟ್ರಿ
Advertisement
ಸಿನಿಮಾ ಕಲಾವಿದರು ಕಷ್ಟ ಮತ್ತು ಸುಖ ಎರಡನ್ನ ಅಭಿಮಾನಿಗಳ ಬಳಿ ಹೇಳಿಕೊಳ್ಳುತ್ತಾರೆ. ಇದೀಗ ತಮ್ಮ ಅಭಿಮಾನಿಗಳ ಬಳಿ ವಿಶೇಷ ಕೋರಿಕೆಯೊಂದನ್ನ ಇಟ್ಟಿದ್ದಾರೆ. ತನ್ನ ದೊಡ್ಡ ಅಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯದ ಸಲುವಾಗಿ ತಾವು ಪ್ರಾರ್ಥನೆ ಮಾಡಿ ಎಂದು ಫ್ಯಾನ್ಸ್ಗೆ ವಿನಂತಿ ಮಾಡಿಕೊಂಡಿದ್ದಾರೆ.
Advertisement
ವೈಯಕ್ತಿಕ ಬದುಕಿನಲ್ಲಿ ಸಂಕಷ್ಟದಲ್ಲಿದ್ದೇನೆ. ನನ್ನ ದೊಡ್ಡ ಅಣ್ಣ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಣ್ಣನಿಗೆ ನಿಮ್ಮ ಪ್ರಾರ್ಥನೆಯ ಅಗತ್ಯವಿದೆ ಎಂದು ನಟಿ ಖುಷ್ಬೂ ಮನವಿ ಮಾಡಿದ್ದಾರೆ.