ಸೌತ್ ಬ್ಯೂಟಿ ಕೀರ್ತಿ ಸುರೇಶ್ (Keerthy Suresh) ಬಂಪರ್ ಚಾನ್ಸ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ಬ್ಯುಸಿಯಿರುವ ಮಹಾನಟಿ ಕೀರ್ತಿ ಸುರೇಶ್ ಈಗ ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ರೊಮ್ಯಾನ್ಸ್ ಮಾಡುವ ಚಾನ್ಸ್ ಸಿಕ್ಕಿದೆ.
Advertisement
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಸದಾ ಗ್ರ್ಯಾಮರ್‌ಗಿಂತ ನಟನೆಯ ಗ್ರಾಮರ್‌ಗೆ ಬೆಲೆ ಕೊಡುವ ನಟಿ. ಪಾತ್ರ ಹೇಗೆ ಇರಲಿ, ಆ ಪಾತ್ರದಿಂದ ಜನರಿಗೆ ಏನು ಸಿಗುತ್ತೆ. ನಟನೆಗೆ ಸ್ಕೋಪ್ ಇದ್ಯಾ? ಎಂದು ನೋಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ‘ಮಹಾನಟಿ’ ಚಿತ್ರ. ಇದೀಗ ನಟನೆಗೆ ಹೆಚ್ಚು ಒತ್ತು ಇರುವ ಸ್ಪಿರಿಟ್ ಸಿನಿಮಾದಲ್ಲಿ ನಟಿಸುವ ಅವಕಾಶ ಬಾಚಿಕೊಂಡಿದ್ದಾರೆ. ಇದನ್ನೂ ಓದಿ:ಮುಂಬೈ ಕರಾವಳಿ ಸುರಂಗ ಮಾರ್ಗ ಮೆಚ್ಚಿದ ಬಿಗ್ ಬಿ
Advertisement
ಅರ್ಜುನ್ ರೆಡ್ಡಿ, ಅನಿಮಲ್ (Animal) ಸಿನಿಮಾಗಳ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಮೂಡಿ ಬರಲಿರುವ ‘ಸ್ಪಿರಿಟ್’ (Spirit Film) ಚಿತ್ರದಲ್ಲಿ ಪ್ರಭಾಸ್ ಜೊತೆ ಮುಖ್ಯಭೂಮಿಕೆಯಲ್ಲಿ ಕೀರ್ತಿ ಸುರೇಶ್ ಕೂಡ ನಟಿಸಲಿದ್ದಾರೆ.
Advertisement
Advertisement
ಇದರ ಜೊತೆ ವರುಣ್ ಧವನ್ (Varun Dhawan) ನಟನೆಯ ‘ಬೇಬಿ ಜಾನ್’ ಸಿನಿಮಾದಲ್ಲಿಯೂ ಕೀರ್ತಿ ನಟಿಸುತ್ತಿದ್ದಾರೆ. ಈ ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಬ್ಯೂಟಿಗೆ ಯಾವ ಚಿತ್ರ ಕೈಹಿಡಿಯಲಿದೆ ಕಾಯಬೇಕಿದೆ.