ಸೌತ್ ಸಿನಿಮಾಗಳಲ್ಲಿ ಗಮನ ಸೆಳೆದ ಸುಂದರಿ ಕೀರ್ತಿ ಸುರೇಶ್ (Keerthy Suresh) ಬಾಲಿವುಡ್‌ಗೆ (Bollywood) ಹಾರಿದ್ದಾರೆ. ವರುಣ್ ಧವನ್ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ಇದೀಗ ಈ ಸಿನಿಮಾಗಾಗಿ ಮಡಿವಂತಿಕೆ ಬಿಟ್ಟು ಲಿಪ್‌ಲಾಕ್ ಮಾಡೋಕೆ ಕೀರ್ತಿ ಸುರೇಶ್ ರೆಡಿಯಾಗಿದ್ದಾರೆ. ಇದನ್ನೂ ಓದಿ:‘ಉತ್ತರಕಾಂಡ’ ಸಿನಿಮಾದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಭಾಗಿ
ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸಿ ಸೂಪರ್ ಸ್ಟಾರ್ ಆಗಿ ಮಿಂಚಿದವರು. ಅದರಲ್ಲೂ ಮಹಾನಟಿ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ವಿಜೇತ ನಟಿ. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ರು. ಗ್ಲ್ಯಾಮರಸ್ & ಹಾಟ್ ಪಾತ್ರಗಳಲ್ಲಿ ಕೀರ್ತಿ ನಟಿಸಿರಲಿಲ್ಲ. ಆದರೆ ಈಗ ರೂಲ್ಸ್‌ನೆಲ್ಲಾ ಈಗ ಮೂಲೆಗಿಟ್ಟು ಬಾಲಿವುಡ್‌ಗೆ ತಕ್ಕಂತೆ ನಟಿ ಬದಲಾಗಲು ರೆಡಿಯಾಗಿದ್ದಾರೆ.

ಅಂದಹಾಗೆ, ವರುಣ್ ಧವನ್ ಜೊತೆಗಿನ ಸಿನಿಮಾ ರಿಲೀಸ್‌ಗೂ ಮುನ್ನವೇ ಅಕ್ಷಯ್ ಕುಮಾರ್ (Akshay Kumar) ನಟನೆಯ ಹೊಸ ಚಿತ್ರಕ್ಕೆ ಕೀರ್ತಿ ನಾಯಕಿಯಾಗಿ ಫೈನಲ್ ಆಗಿದ್ದಾರೆ. ಸೌತ್‌ನಲ್ಲಿ ಮಿಂಚಿದಂತೆ ಬಾಲಿವುಡ್‌ನಲ್ಲಿಯೂ ಬೇಡಿಕೆಯ ನಟಿಯಾಗಲಿ ಎಂಬುದೇ ಅಭಿಮಾನಿಗಳ ಆಶಯ.


