ನಟಿ ಕೀರ್ತಿ ಸುರೇಶ್ (Keerthy Suresh) ಮಹಾನಟಿಯಾಗಿ ಸಕ್ಸಸ್ ಕಂಡಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಗಟ್ಟಿ ನಾಯಕಿಯಾಗಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರು ಆಗಾಗ ಮದುವೆ (Wedding) ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಮದುವೆ ವಿಚಾರದಲ್ಲಿ ಚಾಲ್ತಿಯಲ್ಲಿದೆ.
ದಳಪತಿ ವಿಜಯ್ (Thalapathy Vijay) ಜೊತೆ ಕೀರ್ತಿ ಸುರೇಶ್ ಮದುವೆ ಎಂದು ಹೇಳಲಾಗಿತ್ತು. ಈ ಎಲ್ಲಾ ಊಹಾಪೋಹಗಳಿಗೂ ಕೀರ್ತಿ ತಾಯಿ ಬ್ರೇಕ್ ಹಾಕಿದ್ದರು. ಈಗ ಉದ್ಯಮಿಯೊಬ್ಬರ ಜೊತೆ ಕೀರ್ತಿ ಸುರೇಶ್ ಇರುವ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ. ಬಾಯ್‌ಫ್ರೆಂಡ್‌ನ ಪರಿಚಯಿಸಿದ್ರಾ? ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ.
ಕೀರ್ತಿ ಸುರೇಶ್ ಪ್ರೀತಿಲಿ ಬಿದ್ದಿದ್ದಾರೆ ಅನ್ನುವ ಸುದ್ದಿ ಇದೀಗ ವೈರಲ್ ಆಗ್ತಿದೆ. ಇತ್ತೀಚೆಗೆ ಆಕೆ ಹಂಚಿಕೊಂಡಿದ್ದ ಫೋಟೊವೊಂದು ಇಂತಹದ್ದೊಂದು ಚರ್ಚೆ ಹುಟ್ಟಾಕಿದೆ. ಒಬ್ಬರ ಜೊತೆ ಕೀರ್ತಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಆತನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಆತನೊಟ್ಟಿಗೆ ಇರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಟಿ ಶುಭಾಶಯ ಕೋರಿದ್ದಾರೆ. ಫೋಟೊ ವೈರಲ್ ಆಗ್ತಿದ್ದಂತೆ ಕೀರ್ತಿ ಜೊತೆಗಿರುವ ಆ ವ್ಯಕ್ತಿ ಯಾರು ಎಂದು ಕೆಲವರು ಹುಡುಕಾಟ ಶುರು ಮಾಡಿದ್ದಾರೆ. ಇದನ್ನೂ ಓದಿ:ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್
ಆತನ ಹೆಸರು ಫರ್ಹಾನ್ ಬಿನ್ ಲೈತ್. ರಿಯಲ್ ಎಸ್ಟೇಟ್ ಉದ್ಯಮಿ. ರೆಸ್ಟೋರೆಂಟ್ ಒಡೆಯ. ಆಸ್ತಿ ಅಂತಸ್ತಿನಲ್ಲಿ ಕೀರ್ತಿಗೆ ಹೇಳಿ ಮಾಡಿಸಿದ ಜೋಡಿ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಶೀಘ್ರದಲ್ಲೇ ಮದುವೆ ಎಂದು ಹೇಳಲಾಗುತ್ತಿದೆ.