ಕಿರುತೆರೆ ನಟಿ ಕಾವ್ಯಾ ಗೌಡ (Kavya Gowda) ಅವರು ಮಗುವಿಗೆ ಜನ್ಮ ನೀಡಿ 6 ತಿಂಗಳ ನಂತರ ಇಂದು (ಆ.16) ವರಮಹಾಲಕ್ಷ್ಮಿ ಹಬ್ಬದಂದು ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಗಳು ಸಿಯಾಳ ಮುದ್ದಾದ ವಿಡಿಯೋವನ್ನು ‘ರಾಧಾ ರಮಣ’ (Radha Ramana) ನಟಿ ಕಾವ್ಯಾ ಹಂಚಿಕೊಂಡಿದ್ದಾರೆ.
ಲೈಟ್ ಬಣ್ಣ ಡ್ರೆಸ್ ಧರಿಸಿರುವ ಸಿಯಾಳ ತುಂಟಾಟದ ವಿಡಿಯೋ ಶೇರ್ ಮಾಡಿ, ಕಳೆದ 6 ತಿಂಗಳಿನಿಂದ ತಾಯ್ತನದ ಜರ್ನಿ ತುಂಬ ಪ್ರೀತಿಯಿಂದ ಕೂಡಿತ್ತು. ಇದೊಂದು ಸುಂದರವಾದ ಅನುಭವ. ನನ್ನ ಕೈತೋಳಿನಲ್ಲಿ ಸಿಯಾ ಇಟ್ಟುಕೊಂಡಾಗ ಆದ ಅನುಭವವನ್ನು ಹೇಳಲಾಗದು. ಸಿಯಾಳ ಜರ್ನಿಯನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟಪಡುವೆ ಎಂದು ಕಾವ್ಯಾ ಅವರು ಹೇಳಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಹೇಶ್ ಬಾಬು ಪತ್ನಿ
View this post on Instagram
ಅಂದಹಾಗೆ, ಕಾವ್ಯಾ ಮತ್ತು ಸೋಮಶೇಖರ್ ದಂಪತಿ ಮಗಳಿಗೆ ಸಿಯಾ (Siya) ಎಂದು ಹೆಸರಿಟ್ಟಿದ್ದಾರೆ. ಸಿಯಾ ಅಂದರೆ ಸೀತೆ ಎಂದರ್ಥ. ಜೊತೆಗೆ ಸುಂದರವಾದ ಹೂವು ಎಂದು ಅರ್ಥ ಕೂಡ ಇದೆ.
ಈ ವರ್ಷ ಜನವರಿ 22ರಂದು ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ದಿನ ಮುದ್ದಾದ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದ್ದರು.