ಬಾಲಿವುಡ್ ನ ಖ್ಯಾತ ನಟಿ ಕತ್ರಿನಾ ಕೈಫ್ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಮಾಲ್ಡಿವ್ಸ್ ನಲ್ಲಿ ಆಚರಿಸಿಕೊಳ್ಳಲಿದ್ದಾರಂತೆ. ನಾಳೆ ಅವರು ಹುಟ್ಟಿದ ದಿನ ಹಾಗಾಗಿ ಇಂದು ಪತಿ ವಿಕ್ಕಿ ಕೌಶಲ್ ಜೊತೆ ಅವರು ಮಾಲ್ಡಿವ್ಸ್ ಗೆ ಹಾರಿದ್ದಾರೆ. ಶುಕ್ರವಾರ ಮಧ್ಯಾಹ್ನ ಪತಿ ವಿಕ್ಕಿ ಜೊತೆ ವಿಮಾನ ಏರಿರುವ ಕತ್ರಿನಾ ಕೈಫ್ ಇಂದು ಮಧ್ಯ ರಾತ್ರಿಯಿಂದಲೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು.
ಕತ್ರಿನಾ ಕೈಫ್ ಅವರು ಹುಟ್ಟು ಹಬ್ಬವು ಈ ಬಾರಿ ವಿಶೇಷತೆಯಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಕತ್ರಿನಾ ಪ್ರಗ್ನೆಂಟ್ ಅನ್ನುವ ಸುದ್ದಿಯೂ ಹರಿದಾಡುತ್ತಿದೆ. ಹುಟ್ಟು ಹಬ್ಬದ ಗಿಫ್ಟ್ ಆಗಿ ಈ ಸಿಹಿ ಸುದ್ದಿಯನ್ನು ನಾಳೆ ಅವರು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎನ್ನುವ ಮಾಹಿತಿಯೂ ಇದೆ. ಕತ್ರಿನಾ ತಾಯಿ ಆಗುತ್ತಿರುವ ವಿಷಯ ಹಲವು ದಿನಗಳಿಂದ ಬಾಲಿವುಡ್ ನಲ್ಲಿ ಹರಿದಾಡುತ್ತಿದ್ದರೂ, ಈವರೆಗೂ ಕತ್ರಿನಾ ಆಗಲಿ, ವಿಕ್ಕಿ ಆಗಲಿ ಖಚಿತ ಪಡಿಸಿಲ್ಲ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್
ನಾಳೆ ನಡೆಯಲಿರುವ ಹುಟ್ಟು ಹಬ್ಬದ ಪಾರ್ಟಿಯಲ್ಲಿ ವಿಕ್ಕಿ ಸಹೋದರ ಸನ್ನಿ ಕೌಶಲ್ ಮತ್ತು ಶಾರ್ವತಿ ವಾಘ್ ಕೂಡ ಭಾಗಿಯಾಗಲಿದ್ದು, ಆಪ್ತರಿಗೂ ಆಹ್ವಾನ ನೀಡಿದ್ದಾರಂತೆ. ಸದ್ಯ ಈ ಜೋಡಿ ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದು, ಸಲ್ಮಾನ್ ಖಾನ್ ನಟನೆಯ ಸಿನಿಮಾದಲ್ಲಿ ಕತ್ರಿನಾ ಬ್ಯುಸಿಯಾಗಿದ್ದರೆ, ವಿಕ್ಕಿ ದಿ ಇಮ್ಮಾರ್ಟಲ್ ಅಶ್ವತ್ಥಾಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.