ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಎಂದ ಕಂಗನಾ ಡೈಲಾಗ್‌ಗೆ ಫ್ಯಾನ್ಸ್ ದಿಲ್ ಖುಷ್

Public TV
2 Min Read
kangana ranaut emergency 2

ಬಾಲಿವುಡ್ ಬ್ಯೂಟಿ ಕಂಗನಾ ರಣಾವತ್ (Kangana Ranaut) ಅವರು ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಲ್ಲಿರುತ್ತಾರೆ. ಇದರ ನಡುವೆ ಕಂಗನಾ ನಡೆಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಬರುತ್ತಿದೆ. ಕಂಗನಾ ನಟನೆ, ನಿರ್ಮಾಣದ ಎಮರ್ಜೆನ್ಸಿ (Emergency Film) ಚಿತ್ರದ ಟೀಸರ್ ರಿವೀಲ್ ಆಗಿದೆ. ಕಂಗನಾ ಹೊಡೆದ ಡೈಲಾಗ್‌ಗೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

KANGANA

ಕಂಗನಾ ಕೆರಿಯರ್‌ಗೆ ಸಿನಿಮಾ ಸಕ್ಸಸ್‌ನ ಅವಶ್ಯಕತೆಯಿದೆ. ‘ದಾಕಡ್’ ಚಿತ್ರದ ಸೋಲಿನ ನಂತರ ಇದೀಗ ಇಂದಿರಾ ಗಾಂಧಿ ಗೆಟಪ್‌ನಲ್ಲಿ ಕಾಂಟ್ರವರ್ಸಿ ಕ್ವೀನ್ ಕಂಗನಾ ಎಂಟ್ರಿ ಕೊಟ್ಟಿದ್ದಾರೆ. ಇಂದು ಬಿಡುಗಡೆ ಆಗಿರುವ ಟೀಸರ್‌ನಲ್ಲಿ ‘ಎಮರ್ಜೆನ್ಸಿ’ಯ ಕರಾಳ ಮುಖದ ಸಣ್ಣ ಝಲಕ್ ಅನ್ನು ತೋರಿಸಲಾಗಿದೆ. ಇದನ್ನೂ ಓದಿ:Exclusive: ಅರ್ಜುನ್ ಸರ್ಜಾ ನಿರ್ದೇಶನದ ಚಿತ್ರದಲ್ಲಿ ಉಪ್ಪಿ ಅಣ್ಣನ ಮಗ ನಟಿಸುತ್ತಾರಾ? ನಿರಂಜನ್ ಸ್ಪಷ್ಟನೆ

kangana

ಜನರು ಪೊಲೀಸರತ್ತ ಕಲ್ಲು ತೂರುವುದು, ಪೊಲೀಸರು ಜನರ ಮೇಲೆ ಗುಂಡು ಹಾರಿಸುವುದು, ರಾಷ್ಟ್ರೀಯ ನಾಯಕರನ್ನು ಜೈಲಿಗೆ ತಳ್ಳಿದ್ದು, ಮಾಧ್ಯಮ ಸ್ವಾತಂತ್ರ‍್ಯದ ಮೇಲೆ ನಿಯಂತ್ರಣ ಹೇರಿದ್ದರ ದೃಶ್ಯಗಳನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಜೊತೆಗೆ ಪತ್ರಿಕೆಗಳಲ್ಲಿ ಎಮರ್ಜೆನ್ಸಿಯನ್ನು ಟೀಕಿಸಿದ್ದ ಚಿತ್ರಗಳನ್ನು ಟೀಸರ್‌ನಲ್ಲಿ ಸೇರಿಸಲಾಗಿದೆ. ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ನಟಿಸಿರುವ ನಟ ಅನುಪಮ್ ಖೇರ್ ಅವರ ದೃಶ್ಯದ ಸಣ್ಣ ತುಣುಕುಗಳೂ ಸಹ ಟೀಸರ್‌ನಲ್ಲಿವೆ. ಎಲ್ಲದಕ್ಕಿಂತಲೂ ಹೆಚ್ಚು ಗಮನ ಸೆಳೆಯುವುದು ಕೊನೆಯಲ್ಲಿ ಕಂಗನಾರ ಇಂದಿರಾ ಲುಕ್. ಟೀಸರ್‌ನಲ್ಲಿ ಇಂದಿರಾರದ್ದೇ ಧ್ವನಿ ಏನೋ ಎಂದು ಕಾಡುವಂತಿದೆ ಕಂಗನಾ ಹೇಳಿರುವ ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ ಡೈಲಾಗ್.

‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿ ಕಂಗನಾ ಇಂದಿರಾ ಗಾಂಧಿ (Indira Gandhi)  ಪಾತ್ರದಲ್ಲಿ ನಟಿಸಿದ್ದಾರೆ. ಅವರ ನಟನೆಯ ಸಣ್ಣ ತುಣುಕನ್ನು ಈ ಹಿಂದೆಯೇ ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ಟೀಸರ್ ಮೂಲಕ ಕಂಗನಾ ಮತ್ತೊಮ್ಮೆ ಹವಾ ಕ್ರಿಯೇಟ್ ಮಾಡಿದ್ದಾರೆ. ಇದೇ ನವೆಂಬರ್ 24ಕ್ಕೆ ‘ಎಮರ್ಜೆನ್ಸಿ’ ಚಿತ್ರ ರಿಲೀಸ್ ಆಗಲಿದೆ.

Share This Article