ಸಿಎಂ ಯೋಗಿ ಆದಿತ್ಯನಾಥ್ ನನ್ನ ಅಣ್ಣ ಎಂದ ನಟಿ ಕಂಗನಾ ರಣಾವತ್

Public TV
1 Min Read
Kangana Ranaut

ತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಎನ್ ಕೌಂಟರ್ ಕಾರಣದಿಂದಾಗಿ ಸಖತ್ ಸುದ್ದಿ ಆಗುತ್ತಿದ್ದಾರೆ. ಗ್ಯಾಂಗ್ ಸ್ಟರ್ ಗಳಿಗೆ ಸಿಂಹಸ್ವಪ್ನವಾಗಿರುವ ಯೋಗಿ ಆದಿತ್ಯನಾಥ್ ‘ಮಿಟ್ಟಿ ಮೇ ಮಿಲಾ ದೂಂಗಾ (ಮಣ್ಣಿನೊಳಗೆ ಮಣ್ಣು ಮಾಡುತ್ತೇನೆ’ ಎಂದು ಹೇಳಿದ ಹೇಳಿಕೆ ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ರೌಡಿಗಳ ಹೆಡೆಮೂರಿ ಕಟ್ಟಿ ಜೈಲಿಗೆ ಅಥವಾ ಸ್ಮಶಾನಕ್ಕೆ ಕಳುಹಿಸುತ್ತಿರುವುದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.

kangana ranaut 2

ಉತ್ತರ ಪ್ರದೇಶವನ್ನು ರೌಡಿಗಳಿಂದ ಮುಕ್ತಗೊಳಿಸುತ್ತೇನೆ ಎಂದು ಹೊರಟಿರುವ ಯೋಗಿ ಆದಿತ್ಯನಾಥ್ ಅವರನ್ನು ಬಾಯ್ತುಂಬಾ ಹೊಗಳಿದ್ದಾರೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut). ಯೋಗಿ ಕೈಗೊಂಡಿರುವ ಈ ಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿರುವ ಕಂಗನಾ, ‘ಯೋಗಿ ಆದಿತ್ಯನಾಥ್ ನನ್ನ ಸಹೋದರ. ಅವರನ್ನು ನನ್ನಷ್ಟು ಪ್ರೀತಿಸುವವರೂ ಯಾರೂ ಇಲ್ಲ’ ಎಂದು ಹೇಳಿದ್ದಾರೆ. ಇದನ್ನೂ ಓದಿ: KGF 2ಗೆ 1 ವರ್ಷ- ಪಾರ್ಟ್ 3 ಬಗ್ಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್

kangana ranaut dhaakad 2

ಅಲ್ಲದೇ, ಉಮೇಶ್ ಪಾಲ್ (Umesh Paul) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕ್ ಅಹ್ಮದ್ (Atiq Ahmed) ಅವರ ಮಗ ಅಸದ್ ಮತ್ತು ಆತನ ಸಹಚರರನ್ನು ಉತ್ತರ ಪ್ರದೇಶದ ಪೊಲೀಸರು ಎನ್ ಕೌಂಟರ್ ಮಾಡಿ ಸಾಯಿಸಿದ್ದಾರೆ. ಈ ಸಂಬಂಧವಾಗಿ ಕಂಗನಾ ಹುಮ್ಮಸ್ಸಿನಿಂದಲೇ ಯೋಗಿ ಆದಿತ್ಯನಾಥ್ ಅವರನ್ನು ಮುಕ್ತ ಕಂಠದಿಂದ ಶ್ಲ್ಯಾಘಿಸಿದ್ದಾರೆ.

Kangana Ranaut 4

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ನಕಲಿ ಎನ್ ಕೌಂಟರ್ ಎಂದು ಪ್ರಗತಿಪರರು ವಿರೋಧಿಸುತ್ತಿದ್ದರೆ ಮತ್ತೊಂದು ಕಡೆ ಎನ್ ಕೌಂಟರ್ ಅನ್ನು ಸ್ವಾಗತಿಸಿಯೂ ಬೆಂಬಲ ಸೂಚಿಸಿದ್ದಾರೆ. ಕಂಗನಾ ರಣಾವತ್ ಈ ವಿಷಯದಲ್ಲಿ ಯೋಗಿ ಆದಿತ್ಯನಾಥ್ ಪರವಾಗಿ ಬ್ಯಾಟ್ ಬೀಸಿದ್ದಾರೆ.

Share This Article