
ಬಾದಷಾ ಶಾರುಖ್ ಖಾನ್ (Sharukh Khan) ನಟನೆಯ `ಪಠಾಣ್’ (Pathaan Film) ಚಿತ್ರ ಬಾಕ್ಸಾಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ಶಾರುಖ್ ಚಿತ್ರದಿಂದ ಬಾಲಿವುಡ್‌ಗೆ ಮರುಜೀವ ಬಂದಂತೆ ಆಗಿದೆ. ಇದೀಗ ʻಪಠಾಣ್ʼ ಚಿತ್ರದ ನೋಡಿ ಕಂಗನಾ ರಣಾವತ್ ಹಾಡಿ ಹೊಗಳಿದ್ದಾರೆ.
ನಿರೀಕ್ಷೆಗೂ ಮೀರಿ ಪಠಾಣ್ ಸಿನಿಮಾ ಬಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಹಿಂದಿ ಸಿನಿಮಾಗಳಿಂದ ಗೆಲುವು ಸಿಗದೇ ಸೋತಿದ್ದ ಬಾಲಿವುಡ್‌ಗೆ ಇದೀಗ ಹೊಸ ಕಳೆ ಬಂದಿದೆ. ಜ.25ರಂದು ತೆರೆಗೆ ಅಬ್ಬರಿಸಿದ್ದ `ಪಠಾಣ್’ ಚಿತ್ರಕ್ಕೆ ವ್ಯಾಪಕ್ತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೂಲಗಳ ಪ್ರಕಾರ ಮೊದಲ ದಿನವೇ ಶಾರುಖ್ ಚಿತ್ರ 50ರಿಂದ 51.5 ಕೋಟಿ ರೂ. ಕಲೆಕ್ಷನ್ ಮಾಡಿದೆ. 2ನೇ ದಿನವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
`ಜೀರೋ’ (Zero) ಚಿತ್ರದಿಂದ ಸೋತು ಸುಣ್ಣಗಾಗಿದ್ದ ಶಾರುಖ್‌ಗೆ `ಪಠಾಣ್’ ಚಿತ್ರದಿಂದ ಬೂಸ್ಟ್ ಸಿಕ್ಕಂತೆ ಆಗಿದೆ. ಇನ್ನೂ ಈ ಸಿನಿಮಾ ನೋಡಿ ಕಂಗನಾ ಕೂಡ ರಿಯಾಕ್ಟ್ ಮಾಡಿದ್ದಾರೆ. ಪಠಾಣ್ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಈ ರೀತಿಯ ಸಿನಿಮಾಗಳು ಖಂಡಿತಾ ವರ್ಕ್ ಆಗಬೇಕು. ಹಿಂದಿ ಚಿತ್ರರಂಗವು ಇತರೆ ಚಿತ್ರರಂಗಕ್ಕಿಂತ ಹಿಂದೆ ಬಿದ್ದಿದೆ. ಕೊನೆಗೂ ನಮ್ಮ ಸಿನಿಮಾಗಳ ಮೂಲಕ ಕಮ್‌ಬ್ಯಾಕ್ ಆಗಿದ್ದೇವೆ ಎಂದು ನಟಿ ಹೊಗಳಿದ್ದಾರೆ. ಸಿನಿಮಾ ಮತ್ತು ಶಾರುಖ್ ನಟನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಪುತ್ರಿ ಅಥಿಯಾ- ರಾಹುಲ್ ಮದುವೆಗೆ ದುಬಾರಿ ಉಡುಗೊರೆ ನೀಡಿದ ಸುನೀಲ್ ಶೆಟ್ಟಿ
ಶೀಘ್ರದಲ್ಲಿಯೇ 100 ಕೋಟಿ ರೂಪಾಯಿ ಕ್ಲಬ್‌ಗೆ ಪಠಾಣ್ ಸಿನಿಮಾ ಸೇರಲಿದೆ. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಒಳ್ಳೆಯ ಕಮಾಯಿ ಮಾಡ್ತಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k