‘ಮಗಧೀರ’ನ (Magadheera) ಬೆಡಗಿ ಕಾಜಲ್ ಅಗರ್ವಾಲ್ (Kajal Aggarwal) ಮದುವೆಯಾಗಿ ಮಗು ಆದ್ಮೇಲೆಯೂ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಸತ್ಯಭಾಮಾ ಆಗಿ ಗನ್ ಹಿಡಿದು ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಾಜಲ್ ದರ್ಶನ ಯಾವಾಗ ಎಂದು ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಎಂದೂ ನಟಿಸಿದ ಪಾತ್ರದಲ್ಲಿ ಕಾಜಲ್ ಕಾಣಿಸಿಕೊಂಡಿದ್ದಾರೆ. ಶಿಸ್ತಿನ ಪೊಲೀಸ್ ಅಧಿಕಾರಿಯಾಗಿ ನಟಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಬೆನ್ನಲ್ಲೇ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಮುಂದಿನ ತಿಂಗಳು 17ಕ್ಕೆ ಸತ್ಯಭಾಮಾ ಸಿನಿಮಾ ರಿಲೀಸ್ ಆಗಲಿದೆ.
View this post on Instagram
ಈ ಚಿತ್ರದ ಮೂಲಕ ‘ಕ್ವೀನ್ ಆಫ್ ಮಾಸಸ್’ ಎಂದು ಚಿತ್ರತಂಡ ಬಿರುದು ನೀಡಿದ್ದಾರೆ. ಸದ್ಯ ಕಾಜಲ್ ಹೊಸ ಅವತಾರ ನೋಡಲು ಅಭಿಮಾನಿಗಳು ಕಾತರದಿಂದ ಎದುರು ನೋಡ್ತಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಆರುಷಿ ಶರ್ಮಾ
ಸತ್ಯಭಾಮಾ (Satyabhama) ಸಿನಿಮಾದ ಜೊತೆ ‘ಇಂಡಿಯನ್ 2’ ಚಿತ್ರದಲ್ಲಿ ಕೂಡ ಕಾಜಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.