ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಅವರು ಮದುವೆಯ ಬಳಿಕ ಪುತ್ರ ನೀಲ್ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಈಗ ಮತ್ತೆ ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳನ್ನ ಒಪ್ಪಿಕೊಳ್ಳುವ ಮೂಲಕ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆದರು. ಈ ನಡುವೆ ಮಗಧೀರ ಬೆಡಗಿ ಕಾಜಲ್ ಅವರ ಬಗ್ಗೆ ಹೊಸ ವಿಚಾರವೊಂದರು ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ. ನಟನೆಗೆ (Films) ಬೈ ಬೈ ಹೇಳ್ತಿದ್ದಾರಂತೆ ನಟಿ ಕಾಜಲ್ ಅಗರ್‌ವಾಲ್.
ತೇಜ ನಿರ್ದೇಶನದ ‘ಲಕ್ಷ್ಮಿ ಕಲ್ಯಾಣಂ’ ಸಿನಿಮಾ ಮೂಲಕ ಕಾಜಲ್ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ನಂತರ ಕೃಷ್ಣವಂಶಿ ನಿರ್ದೇಶನದ ‘ಚಂದಮಾಮ’ ಸಿನಿಮಾ ಮೂಲಕ ಕಾಜಲ್ ಫೇಮಸ್ ಆಗಿದ್ದಾರೆ. ಬಳಿಕ ತೆಲುಗು- ತಮಿಳಿನ ಟಾಪ್ ಸ್ಟಾರ್ ನಟರಿಗೆ ಕಾಜಲ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮದುವೆಯಾಗಿ ಮಗುಯಾದ ಮೇಲೂ ಕಾಜಲ್ ತನ್ನ ಚಾರ್ಮ್ ಹಾಗೇ ಉಳಿಸಿಕೊಂಡಿದ್ದಾರೆ. ಬಳಕುವ ಬಳ್ಳಿಯಂತೆ ಫಿಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ
ಮದುವೆಯ (Wedding) ನಂತರ ಕಾಜಲ್ ತೆಲುಗಿನಲ್ಲಿ ಬಾಲಯ್ಯ (Balayya) ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ಕರುಂಗಪಿಯಂ, ಪ್ಯಾರಿಸ್ ಪ್ಯಾರಿಸ್, ಕ್ವೀನ್ ರಿಮೇಕ್, ಇಂಡಿಯನ್ 2 ಮುಂತಾದ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ‘ಉಮಾ’ (Uma) ಎಂಬ ಹಿಂದಿ ಸಿನಿಮಾದಲೂ ನಟಿಸುತ್ತಿದ್ದಾರೆ. ಕಾಜಲ್ ಈ ಎಲ್ಲಾ ಸಿನಿಮಾಗಳನ್ನು ಕಂಪ್ಲೀಟ್ ಮಾಡುವ ಆತುರದಲ್ಲಿದ್ದಾರೆ.
ಇದೇ ವೇಳೆ ಕಾಜಲ್ ತನ್ನ ಪತಿ ಮತ್ತು ಮಕ್ಕಳ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಕುಟುಂಬದ ದೃಷ್ಟಿಯಿಂದ ಕಾಜಲ್ ತಮ್ಮ ನೆಚ್ಚಿನ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಲಿದ್ದಾರಂತೆ. ಸಿನಿಮಾ ಶೂಟಿಂಗ್ ಎಂದು ಹೆಚ್ಚಾಗಿ ಹೊರಗೆ ಇರಬೇಕಾಗುತ್ತದೆ. ಪತಿ ಮತ್ತು ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಸಾಧ್ಯವಾಗ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಸಿನಿಮಾಗಳಿಂದ ದೂರ ಉಳಿಯಲು ಕಾಜಲ್ ನಿರ್ಧರಿಸಿದ್ದಾರಂತೆ.
ಮಗ ನೀಲ್ ಗಾಗಿ (Neel) ಕಾಜಲ್ ಈ ತ್ಯಾಗ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ಮಗನ ಜೊತೆ ಹೆಚ್ಚಿನ ಸಮಯ ಕಳೆಯಲು ಆಗ್ತಿಲ್ಲ. ಈ ವಯಸ್ಸಿನಲ್ಲಿ ಮಗುವಿಗೆ ತಾಯಿಯ ಪ್ರೀತಿ ಹೆಚ್ಚು ಅಗತ್ಯವಿದ್ದು ಆಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಕಾಜಲ್ ಯಾವುದೇ ಸ್ಪಷ್ಟನೆ ನೀಡಿಲ್ಲ.