ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಸಿನಿಮಾ ಕೆರಿಯರ್‌ನಲ್ಲಿ ಬಿಗ್ ಸಕ್ಸಸ್ ಸಿಗದೆ ಇದ್ರೂ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಸಿದ್ಧಾರ್ಥ್ ಮಲ್ಹೋತ್ರಾಗೆ (Siddarth Malhotra) ಜೋಡಿಯಾಗಿ ನಟಿಸಲು ಜಾನ್ವಿಗೆ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:‘ಪುಟ್ಟಕ್ಕನ ಮಕ್ಕಳು’ ಸ್ನೇಹಾ ಪಾತ್ರ ಅಂತ್ಯ- ಫ್ಯಾನ್ಸ್‌ಗೆ ಸಂದೇಶ ನೀಡಿದ ಸಂಜನಾ
ಲವ್ ಕಮ್ ಕಾಮಿಡಿ ಸಿನಿಮಾದಲ್ಲಿ ಸಿದ್ಧಾರ್ಥ್‌ಗೆ ಜಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ಪರಮ ಸುಂದರಿ’ (Param Sundari) ಎಂಬ ಕ್ಯಾಚಿ ಟೈಟಲ್ ಅನ್ನು ಇಡಲಾಗಿದೆ. ಚಿತ್ರದಲ್ಲಿ ದೆಹಲಿಯ ಉದ್ಯಮಿ ಸಿದ್ಧಾರ್ಥ್ ಜೊತೆ ಕೇರಳದ ಹುಡುಗಿ ಜಾನ್ವಿಗೆ ಹೇಗೆ ಲವ್ ಆಗುತ್ತೆ, ಮುಂದೆ ಎನೆಲ್ಲಾ ತಿರುವು ಸಿಗಲಿದೆ ಅನ್ನೋದೆ ಚಿತ್ರದ ತಿರುಳಾಗಿದೆ.
ಈ ಚಿತ್ರವನ್ನು ತುಷಾರ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಡಿಸೆಂಬರ್‌ನಿಂದ ‘ಪರಮ ಸುಂದರಿ’ ಶೂಟಿಂಗ್ ಶುರುವಾಗಲಿದೆ. ಮೊದಲ ಬಾರಿಗೆ ಜಾನ್ವಿ ಮತ್ತು ಸಿದ್ಧಾರ್ಥ್ ಜೊತೆಯಾಗಿ ನಟಿಸುತ್ತಿರುವ ಕಾರಣ, ಚಿತ್ರದ ಕುರಿತು ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.
ಜ