‘ಕಲ್ಕಿ’ ಸಿನಿಮಾದ ಸಕ್ಸಸ್ ನಂತರ ‘ಸೀತಾರಾಮಂ’ (Seetharamam) ಡೈರೆಕ್ಟರ್ ಹನು ರಾಘವಪುಡಿ ಜೊತೆ ಪ್ರಭಾಸ್ (Prabhas) ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ರೀಲ್ಸ್ ರಾಣಿ ಇಮಾನ್ ಇಸ್ಮಾಯಿಲ್ ನಾಯಕಿಯಾಗಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಇಮಾನ್ ಅವರು ಪ್ರಭಾಸ್‌ಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.
View this post on Instagram
ಹೈದರಾಬಾದ್ ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ಇಮಾನ್ವಿ (Imanvi) ಎಂದೇ ಫೇಮಸ್ ಆಗಿರುವ ರೀಲ್ಸ್ ರಾಣಿ ಕೂಡ ಭಾಗಿಯಾಗಿದ್ದರು. ಇದು ಅನೇಕರ ಗಮನ ಸೆಳೆದಿದೆ. ರೀಲ್ಸ್ ರಾಣಿ ಇಮಾನ್ವಿ ಮೊದಲ ಸಿನಿಮಾನೇ ಪ್ರಭಾಸ್ ಜೊತೆ ನಟಿಸುತ್ತಿರುವ ಬಗ್ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಈಕೆಯ ಹಿನ್ನೆಲೆ ಬಗ್ಗೆಯೂ ಆಸಕ್ತಿ ತೋರಿಸುತ್ತಿದ್ದಾರೆ.
View this post on Instagram
ಇನ್ನೂ ಇನ್ಸ್ಟಾಗ್ರಾಂನಲ್ಲಿ 70 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ನಟಿ, ತನ್ನ ಡ್ಯಾನ್ಸ್ ವಿಡಿಯೋಗಳಿಂದ ಸದಾ ಗಮನ ಸೆಳೆಯುತ್ತಾರೆ. ಆಕೆಯ ಡ್ಯಾನ್ಸ್ ಮೂವ್ಸ್‌ಗೆ ಮರುಳಾಗದವರಿಲ್ಲ. ಕೆಲ ಸಣ್ಣ ಪುಟ್ಟ ಚಿತ್ರಗಳಲ್ಲಿ ನಟಿಸಿರುವ ಇಮಾನ್ವಿ ಹೆಚ್ಚು ಡ್ಯಾನ್ಸರ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಚಿರಪರಿಚಿತ. ದೆಹಲಿ ಮೂಲದ ಈ ಚೆಲುವೆ ಯೂಟ್ಯೂಬ್ ಚಾನೆಲ್‌ನಲ್ಲಿ 1.81 ಮಿಲಿಯನ್ ಸಬ್‌ಸ್ಕೈಬರ್ ಹೊಂದಿದ್ದಾರೆ. ಇನ್ನೂ ತಂದೆಯ ಪ್ರೋತ್ಸಾಹದೊಂದಿಗೆ ಕೆಲಸ ಬಿಟ್ಟು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಈಗ ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಅಂದಹಾಗೆ, ಪ್ರಭುತ್ವಕ್ಕಾಗಿ ಯುದ್ಧ ನಡೆದಾಗ ಒಬ್ಬ ಯೋಧ ಯಾವುದಕ್ಕಾಗಿ ತಾವು ಹೋರಾಡಬೇಕು ಎಂಬ ಎಂಬರ್ಥದ ಶೀರ್ಷಿಕೆಯೊಂದಿಗೆ ಈ ಪೋಸ್ಟ್ ಅನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡಿದೆ. 1940ರ ದಶಕದ ಕಥೆಯನ್ನು ಆಧರಿಸಿರುವ ಐತಿಹಾಸಿಕ ಕಾಲ್ಪನಿಕ ಚಿತ್ರ ಇದು ಎನ್ನಲಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುತ್ತದೆ.