ಕನ್ನಡದ ಚಿತ್ರರಂಗದ ಸ್ಟಾರ್ ದಂಪತಿ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ಭುವನ್ ಪೊನ್ನಣ್ಣ (Bhuvan Ponnanna) ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೊಡವ ಸಂಪ್ರದಾಯದ ಉಡುಗೆಯಲ್ಲೇ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿರುವ ದಂಪತಿ ಮಗುವಿನ ಆಗಮನದ ಸುದ್ದಿ ಘೋಷಿಸಿದ್ದಾರೆ. ಇದನ್ನೂ ಓದಿ:ದರ್ಶನ್ ಪ್ರಕರಣಕ್ಕೆ ಪರೋಕ್ಷವಾಗಿ ಸುಮಲತಾ ಪ್ರತಿಕ್ರಿಯೆ
ಇದೇ ಅಕ್ಟೋಬರ್‌ನಲ್ಲಿ ಮಗು ಬರಲಿರುವ ಸಂತಸದಲ್ಲಿದ್ದಾರೆ ಹರ್ಷಿಕಾ ದಂಪತಿ. ಬಹುಕಾಲದ ಸ್ನೇಹಿತರಾಗಿದ್ದ ಭುವನ್ ಮತ್ತು ಹರ್ಷಿಕಾ ಕಳೆದ ವರ್ಷ ಆಗಸ್ಟ್ 24ರಂದು ಕೊಡಗಿನಲ್ಲೇ ಅವರ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಇದೀಗ ವರ್ಷದೊಳಗೆ ಮಗು ಆಗಮಿಸುವ ಸುದ್ದಿ ಕೊಟ್ಟಿದ್ದಾರೆ.
View this post on Instagram
ಕೊಡವ ಸಂಪ್ರದಾಯದ ಹಳ್ಳಿ ಮನೆಯಲ್ಲಿ ಕ್ಲಾಸಿಕ್ ಶೈಲಿಯಲ್ಲಿ ದಂಪತಿ ಫೋಟೋಶೂಟ್ ಮಾಡಿಸಿದ್ದಾರೆ. ಇಡೀ ಕುಟುಂಬ ಅದೇ ಶೈಲಿಯಲ್ಲೇ ಕಂಗೊಳಿಸಿದೆ. ಕಪ್ಪು ಮಿಶ್ರಿತ ಬ್ರೌನ್ ಕಲರ್ ಕೊಡವ ಶೈಲಿಯ ಸೀರೆ ಧರಿಸಿರುವ ಹರ್ಷಿಕಾ ಬೇಬಿ ಬಂಪ್ ಪ್ರದರ್ಶಿಸಿದ್ದಾರೆ. ಇನ್ನು ತಂದೆಯಾಗುತ್ತಿರುವ ಭುವನ್ ಪೊನ್ನಣ್ಣ ಕೊಡವ ಸಂಪ್ರದಾಯದ ಕಪ್ಪು ಕೋಟ್ ಧರಿಸಿ-ತಲೆಗೆ ಪೇಟಾ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ಗರ್ಭಿಣಿ ಪತ್ನಿ ಜೊತೆ ನಿಂತಿದ್ದಾರೆ.

ಫ್ಯಾಶನ್ ಕ್ಷೇತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಭುವನ್ ಮತ್ತು ಹರ್ಷಿಕಾ ಜೋಡಿ ಇದೀಗ ಪ್ರೆಗ್ನೆನ್ಸಿ ರಿವೀಲ್ ಫೋಟೋಶೂಟ್‌ನಲ್ಲೂ ಯೂನಿಕ್ ಕಾನ್ಸೆಪ್ಟ್ ಪ್ಲ್ಯಾನ್ ಮಾಡಿದ್ದು ವಿಶೇಷ. ಇಲ್ಲಿ ಕೊಡವರ ತುಂಬು ಕುಟುಂಬದ ಶೈಲಿಯನ್ನ ಅನಾವರಣ ಮಾಡಿದ್ದಾರೆ ದಂಪತಿ. ಕುಟುಂಬಸ್ಥರೆಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ನಿಂತು ಗರ್ಭಿಣಿ ಮನೆ ಸೊಸೆಯನ್ನ ಪರಿಚಯಿಸುವ ಶೈಲಿಯ ವಿಡಿಯೋ ಈಗ ನೋಡುಗರ ಗಮನ ಸೆಳೆಯುತ್ತದೆ.


