ಬೆಂಗಳೂರು: ಚಿತ್ರರಂಗದಲ್ಲಿ ಹೆಸರು ಮಾಡಲು 15 ವರ್ಷ ಕಷ್ಟಪಡಬೇಕು. ಆದರೆ ಒಂದು ಕ್ಷಣದಲ್ಲಿ ಅವರ ಕಷ್ಟವನ್ನು ಹಾಳು ಮಾಡಬಾರದು. ಪ್ರಚಾರಕ್ಕಾಗಿ ಒಬ್ಬರ ಹೆಸರನ್ನ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ತಿಳಿಸಿದ್ದಾರೆ.
ಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಅಭಿಯಾನ ಮೀಟೂ. ಆದರೆ ಅದನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿ ತೊಂದರೆ ಅನುಭವಿಸಿದ ಹೆಣ್ಣು ಮಕ್ಕಳು ಅಭಿಯಾನದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬೇಡ ಅಂದರೆ ಚಿತ್ರರಂಗದಲ್ಲಿ ಯಾರೂ ಬಲವಂತ ಮಾಡಲ್ಲ. ನಿಮಗೆ ತೊಂದರೆ ಆದರೆ ಚಿತ್ರರಂಗ ಬಿಟ್ಟು ಹೋಗಿ ಎಂದು ಹರ್ಷಿಕಾ ಪೂಣಚ್ಚ ಖಡಕ್ ಆಗಿ ಹೇಳಿಕೆ ನೀಡಿದರು.
Advertisement
Advertisement
ಇದೇ ವೇಳೆ ತಮ್ಮ ಮೀಟೂ ಅನುಭವದ ಕುರಿತು ಮಾಹಿತಿ ನೀಡಿದ ಪೂಣಚ್ಚ, ನನಗೂ ಬಾಲಿವುಡ್ ರಂಗದಿಂದ ಆಫರ್ ಬಂದಿತ್ತು. ಇದರಲ್ಲಿ ಲೈಂಗಿಕ ಕಿರುಕುಳ ನೀಡುವ ವಿಷಯ ಕಂಡು ಬಂತು. ಅದ್ದರಿಂದ ನಾನು ಆ ಸಿನಿಮಾವನ್ನು ಬಿಟ್ಟು ಬಂದೆ. ನಮಗೆ ಚಿತ್ರರಂಗದಲ್ಲಿ ಒಂದೇ ಸಿನಿಮಾ ಎಂದು ಏನು ಇಲ್ಲ. ಜೀವನದಲ್ಲಿ ನಮಗೇ ಸಾಕಷ್ಟು ಅವಕಾಶಗಳಿದೆ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗುತ್ತೆ. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ನಾನು 2 ವರ್ಷ, 10 ವರ್ಷದ ಹಿಂದಿನ ಮಾತು ಹೇಳುತ್ತಿಲ್ಲ. ಅದ್ದರಿಂದ ಇದು ತಪ್ಪು ಎಂದು ಅನಿಸುತ್ತಿದೆ ಎಂದರು.
Advertisement
ಚಿತ್ರರಂಗದ ಪರ ನಿಲ್ಲುತ್ತೇನೆ: ಸಿನಿಮಾ ರಂಗ ಎಂಬುವುದು ನಮಗೇ ಊಟ ನೀಡುವ ಕ್ಷೇತ್ರ. ನಮ್ಮ ಕನಸು ನನಸಾಗುವುದು ಇಲ್ಲಿ, ಹರ್ಷಿಕಾ ಪೂಣಚ್ಚ ಎಂಬ ಹೆಸರು ಜನರಿಗೆ ತಿಳಿದಿರುವುದು ಸಿನಿಮಾದಿಂದಲೇ. ಅದ್ದರಿಂದ ನಾನು ಅಷ್ಟು ಬೇಗ ಇದನ್ನು ಬಿಟ್ಟುಕೊಡುವುದಿಲ್ಲ. ನಾನು ಸಿನಿಮಾ ಕ್ಷೇತ್ರದ ಪರವೇ ನಿಲುತ್ತೇನೆ. ಅಡ್ವಾಂಟೇಜ್ ಕೊಟ್ಟರೆ ಮಾತ್ರ ತೆಗೆದುಕೊಳುತ್ತಾರೆ. ನೀವು ಕೊಡಲ್ಲ ಎಂದು ತಿಳಿದ ಮರು ಕ್ಷಣ ಅವರು ಸುಮ್ಮನಾಗುತ್ತಾರೆ ಎಂದರು.
Advertisement
ಕೆಲ ನಟಿಯರು ವಿದೇಶಕ್ಕೆ ಹೋಗಿ ಗಣವ್ಯಕ್ತಿಗಳಿಂದ ಉಪಯೋಗ ಪಡೆದುಕೊಳುತ್ತಾರೆ. ಸಿನಿಮಾ ಬೇಕು, ಪ್ರಚಾರ ಬೇಕು ಎಂದು ಹೇಳುತ್ತೀರಾ? ಸಿನಿಮಾ ಕೊಡುವವರ ಬಗ್ಗೆಯೇ ಯಾಕೆ ಮಾತಾಡ್ತೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಚಿತ್ರರಂಗದಲ್ಲಿ ಅವಕಾಶಗಳ ಕೊರತೆ ಇರುವುದರಿಂದ ಅವಕಾಶಕ್ಕಾಗಿ ಈ ರೀತಿ ಆಗುತ್ತದೆ. ಅದ್ದರಿಂದ ಸಿನಿಮಾ ಕೊಟ್ಟು ಲೈಫ್ ಕೊಟ್ಟವರಿಗೆ ಏಕೆ ಹೀಗೆ ಮಾಡುತ್ತಿದ್ದಾರೆ. ಈ ಹೇಳಿಕೆ ನೀಡಿದ ಬಳಿಕ ನನಗೆ ಬೆದರಿಕೆ ಕರೆಗಳು ಕೂಡ ಬಂದಿದೆ. ಆದರೆ ನಾನು ಏನು ನಡೆದರೂ ಸಿನಿಮಾ ರಂಗದ ಪರವೇ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದರು.
ಈ ಫೇಮಸ್ ನಟಿಯ ಅರ್ಧ ಬೆತ್ತಲೆ ದೃಶ್ಯ ಚಿತ್ರೀಕರಿಸುತ್ತಿದ್ದರು. ಇದು ಇರಬೇಕಾದ್ದು ಹೀಗಲ್ಲ. ಅಲ್ವಾ? ನಾನು ಒಬ್ಬ ನಟಿಯಾಗಿ ನನಗೂ ಈ ಥರ ಹಲವರು ಕೇಳಿದ್ದಾರೆ. ಅದನ್ನ ನಾನು ಅಷ್ಟೇ ವಿನಮ್ರತೆಯಿಂದ ಆಗಲೇ ನನ್ನ ಆದ್ಯತೆಗಳು, ನನ್ನ ಮೌಲ್ಯಗಳು ಏನು ಅನ್ನೋದನ್ನ ಸ್ಪಷ್ಟಪಡಿಸಿದ್ದೇನೆ. ಈಗ 10 ವರ್ಷಗಳ ಬಳಿಕ ಯಾವುದೇ ಚಿತ್ರರಂಗದ ಯಾವೊಬ್ಬ ವ್ಯಕ್ತಿಯೂ ನನ್ನತ್ತ ಬೆರಳು ಮಾಡಿ ತೋರಿಸುವುದಿಲ್ಲ. ಏಕೆಂದರೆ ನಾನು ಪ್ಯೂರ್ ಮತ್ತು ಕ್ಲೀನ್ ಆಗಿದ್ದೆ. ನಾನು ಮಾಡಿದ ಕೆಲಸಗಳು ಕ್ಲೀನ್ ಆಗಿದ್ದವು. ಇದರಿಂದ ನನಗೆ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳ ಜೊತೆ ದೊಡ್ಡ ಪ್ರಾಜೆಕ್ಟ್‍ಗಳು ಕೈತಪ್ಪಿರಬಹುದು. ಆದರೆ ನಾನು ಸಂತೋಷವಾಗಿದ್ದೇನೆ. ಜನರ ಜೊತೆಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದೇನೆ ಎಂದು ಟ್ವೀಟ್ ಮಾಡಿ ತಮ್ಮ ಹೇಳಿಕೆ ಸಮರ್ಥನೆ ನೀಡಿದ್ದಾರೆ.
ಗಂಡಸರೂ ಮೀಟೂ ಅಭಿಯಾನವನ್ನು ಶುರು ಮಾಡಲು ಸರಿಯಾದ ಸಮಯ ಬಂದಿದೆ. ಏಕೆಂದರೆ ನಟಿಯರು ನಟರ ಹೆಸರು ಬಳಸಿ ಪ್ರಚಾರ ಪಡೆದು ಬಳಿಕ ಕೈಕೊಟ್ಟ ಹಲವರನ್ನು ನಾನು ನೋಡಿದ್ದೇನೆ. ಇಷ್ಟು ದಿನ ಸಹ ನಟಿಯರ ಬಗ್ಗೆ ಮಾತನಾಡಬಾರದು ಎಂದು ಸುಮ್ಮನಿದ್ದೆ. ಆದರೆ ಇಂದು ಕೆಲ ನಟಿಯರು ನಮಗೇ ಅನ್ನ ಕೊಟ್ಟ ಚಿತ್ರರಂಗವನ್ನು ನಗೆಪಾಟಲು ಮಾಡಲು ಮುಂದಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://twitter.com/actressharshika/status/1055764883029942272
https://twitter.com/actressharshika/status/1055764774506516481
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=iCz49tD85ZI