ಸ್ಯಾಂಡಲ್‌ವುಡ್ (Sandalwood) ಚಿಟ್ಟೆ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ (Bhuvan Ponnanna) ಅವರು ಇದೇ ಆಗಸ್ಟ್ 24ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಕೊಡಗಿನ ಜೋಡಿ ಗುಡ್ ನ್ಯೂಸ್ ಕೊಡ್ತಿದ್ದಾರೆ.
ಚಿತ್ರರಂಗದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರ ಹಿಂದೆ ಮತ್ತೊಂದು ಜೋಡಿ ಹಸೆಮಣೆ ಏರುತ್ತಿದ್ದಾರೆ. ಹರಿಪ್ರಿಯಾ-ವಸಿಷ್ಠ, ಅಭಿಷೇಕ್ ಅಂಬರೀಶ್- ಅವಿವಾ ಜೋಡಿ ನಂತರ ಹರ್ಷಿಕಾ-ಭುವನ್ ದಾಂಪತ್ಯ ಬದುಕಿಗೆ ಅಣಿಯಾಗುತ್ತಿದ್ದಾರೆ.
‘ಪಿಯುಸಿ’ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪರಿಚಿತರಾದ ನಟಿ ಹರ್ಷಿಕಾ ಪೂಣಚ್ಚ (Harshika Poonachcha) ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ತಮಸ್ಸು, ಜಾಕಿ ಚಿತ್ರದಲ್ಲಿ ಹರ್ಷಿಕಾ ಅದ್ಭುತವಾಗಿ ನಟಿಸಿದ್ದರು. ಕೊಡಗಿನ ಕುವರಿ ಹರ್ಷಿಕಾ ಅವರು ಸಾಲು ಸಾಲು ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಳ್ಳುವ ಸಂದರ್ಭದಲ್ಲಿ 2010ರಲ್ಲಿ ಭುವನ್ ಪೊನ್ನಣ್ಣ ಅವರು `ಜಸ್ಟ್ ಮಾತ್ ಮಾತಲ್ಲಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಗಣೇಶ್ ನಟನೆಯ ಕೂಲ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಭುವನ್ ನಟಿಸಿದ್ರು. ಆದರೆ ಗುರುತಿಸುವಂತಹ ಪಾತ್ರ ಅವರಿಗೆ ಸಿಗಲೇ ಇಲ್ಲಾ. ಅದ್ಯಾವಾಗ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶೋ ಮೂಲಕ ದೊಡ್ಮನೆಗೆ ಕಾಲಿಟ್ರೋ ಅಂದಿನಿಂದ ಕನ್ನಡಿಗರ ಕಣ್ಣಿಗೆ ಭುವನ್ ಗಮನ ಸೆಳೆದರು. ಇದನ್ನೂ ಓದಿ:ಮಗಳೊಂದಿಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ರಾಧಿಕಾ ಪಂಡಿತ್
ಹರ್ಷಿಕಾ- ಭುವನ್ ಒಂದೇ ಜಿಲ್ಲೆ ಕೊಡಗಿನವರಾಗಿದ್ದಾರೆ. ಆ ಆಪ್ತತೆಯೇ ಇಬ್ಬರನ್ನು ಲವ್ ರಿಂಗ್‌ಗೆ ಬೀಳುವಂತೆ ಮಾಡಿತ್ತು. ಹಲವು ವರ್ಷಗಳ ಗೆಳೆತನವೇ ಇಂದು ಮದುವೆಯೆಂಬ ಹೊಸ ಹೆಜ್ಜೆ ಇಡಲು ಸಾಕ್ಷಿಯಾಗಿದೆ. ಈ ಜೋಡಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಅನೇಕ ಬಾರಿ ಗಾಸಿಪ್ ಹಬ್ಬಿತ್ತು. ಆದರೆ ಆ ಕುರಿತು ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ಅವರಿಬ್ಬರು ವೈವಾಹಿಕ ಜೀವನ ಆರಂಭಿಸುವ ಸಿದ್ಧತೆಯಲಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿವೆ. ಇದನ್ನೂ ಓದಿ:ಮಗಳೊಂದಿಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ರಾಧಿಕಾ ಪಂಡಿತ್
ಜುಲೈ 15ಕ್ಕೆ ಕೊಡಗಿನಲ್ಲಿ ಭುವನ್ ಮನೆಯ ಗೃಹಪ್ರವೇಶ ಸಮಾರಂಭ ನಡೆದಿದೆ. ಇದಾದ ಬಳಿಕ ಕೊಡವ (Kodava) ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 23- 24ರಂದು ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ (Wedding) ನಡೆಯಲಿದೆ. ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ನಡೆಯಲಿದೆ. ರಾಜಕೀಯ- ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸದ್ಯ ಈ ಜೋಡಿ, ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.