ಅಭಿಮಾನಿಗಳ ಮುಂದೆ ಅಪ್ಪು, ದಚ್ಚು, ಸುದೀಪ್ ಬಗ್ಗೆ ಹರಿಪ್ರಿಯಾ ಹೇಳಿದ್ದು ಹೀಗೆ

Public TV
1 Min Read
HARIPRIYA PDS

ಬೆಂಗಳೂರು: ಸ್ಯಾಂಡಲ್‍ವುಡ್‍ನ ಉಗ್ರಂ ಖ್ಯಾತಿಯ ನೀರ್ ದೋಸೆ ಬೆಡಗಿ ಇಂದು ಅಭಿಮಾನಿಗಳ ಜೊತೆಯಲ್ಲಿ ಫೇಸ್‍ಬುಕ್ ಲೈವ್‍ನಲ್ಲಿ ಪುನೀತ್ ರಾಜ್‍ಕುಮಾರ್, ದರ್ಶನ್ ಮತ್ತು ಸುದೀಪ್ ಅವರೊಂದಿಗೆ ನಟಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪುನೀತ್ ರಾಜ್‍ಕುಮಾರ್: ದೊಡ್ಮನೆ ಹುಡುಗ ಪುನೀತ್ ಸರ್ ಜೊತೆ ಅಂಜನಿಪುತ್ರ ಸಿನಿಮಾದ ಇಂಟರ್ ಡ್ಯೂಸಿಂಗ್ ಸಾಂಗ್ ನಲ್ಲಿ ಗೆಸ್ಟ್ ಅಪೀಯರನ್ಸ್ ನಲ್ಲಿ ಡ್ಯಾನ್ಸ್ ಮಾಡಿದ್ದೇನೆ. ಮೊದಲಿಗೆ ಅಪ್ಪು ಸರ್ ಜೊತೆ ಡ್ಯಾನ್ಸ್‍ನಲ್ಲಿ ಹೇಗೆ ಮ್ಯಾನೇಜ್ ಮಾಡೋದು ಅಂತಾ ಭಯವಾಗಿತ್ತು. ಡ್ಯಾನ್ಸ್ ಮಾಸ್ಟರ್ ಹರ್ಷ ತುಂಬಾನೇ ಸಹಾಯ ಮಾಡಿದರು. ಪುನೀತ್ ಸರ್ ಸಹ ಹೆಲ್ಪ್ ಮಾಡಿದರು.

Haripriya 3

ದರ್ಶನ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಲ್ಲಿ ಮೊದಲ ಬಾರಿಗೆ ಕುರುಕ್ಷೇತ್ರದಲ್ಲಿ ನಟಿಸಿದ್ದೇನೆ. ಪೌರಾಣಿಕ ಸಿನಿಮಾಗಳಲ್ಲಿ ನಟಿಸಬೇಕೆಂದು ಆಸೆಯಿತ್ತು, ಅದು ದರ್ಶನ್ ಅವರೊಂದಿಗೆ ನಟಿಸಿದ್ದು ತುಂಬಾನೇ ಖುಷಿ ತಂದಿದೆ. ಪೌರಾಣಿಕ ಸಿನಿಮಾಗಳಲ್ಲಿ ಡಿಫೆರೆಂಟ್ ಕಾಸ್ಟೂಮ್ ಧರಿಸಿ ನಟಿಸುವುದು ಒಂದು ಸುಂದರ ಅನುಭವವಾಗಿದೆ.

Haripriya 2

ಸುದೀಪ್: ಕನ್ನಡದ ಮಾಣಿಕ್ಯ ಸುದೀಪ್ ಜೊತೆಯಲ್ಲಿ ಈಗಾಗಲೇ ರನ್ನ ಸಿನಿಮಾದಲ್ಲಿ ನಟಿಸಿದ್ದೇನೆ. ಅದು ನನಗೆ ಸಾಕಾಗಿಲ್ಲ. ಇನ್ನೊಮ್ಮೆ ಅವರೊಂದಿಗೆ ನಟಿಸಬೇಕೆಂಬ ಆಸೆಯಿದೆ ಎಂದು ತಿಳಿಸಿದರು.

Haripriya 4

ನಿನ್ನೆ ತಾನೇ ಸೂಜಿದಾರ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಬಂದಿದ್ದೇನೆ. ಸೂಜಿದಾರದಲ್ಲಿ ಪ್ರಬುದ್ಧ ಪದ್ಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೇನು ಭರ್ಜರಿ ಸಿನಿಮಾ ತೆರೆಕಾಣಲಿದೆ. ಲೈಫ್ ಜೊತೆ ಒಂದು ಸೆಲ್ಫಿ, ಕಥಾ ಹಂದರ, ಸಂಹಾರ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲ ಸಿನಿಮಾಗಳು ಶೀಘ್ರದಲ್ಲೇ ತೆರೆಕಾಣಲಿವೆ.

https://twitter.com/HaripriyaFC/status/905073142220988416

Haripriya 5

Haripriya 1

Haripriya 7

Haripriya 6

 

Share This Article
Leave a Comment

Leave a Reply

Your email address will not be published. Required fields are marked *