ಬೆಂಗಳೂರು: ಶೃತಿ ಹರಿಹರನ್ ಮೀಟೂ ಆರೋಪದ ಬಗ್ಗೆ ನಟಿ ಹರಿಪ್ರಿಯಾ ಅವರು ಪ್ರತಿಕ್ರಿಯಿಸಿದ್ದು, ಅರ್ಜುನ್ ಸರ್ಜಾ ಪರ ಬ್ಯಾಟಿಂಗ್ ಮಾಡಿದ್ದಾರೆ.
ನಟಿ ಹರಿಪ್ರಿಯಾ ಅವರು ವಿಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. “ಅರ್ಜುನ್ ಸರ್ ಬಗ್ಗೆ ಈಗ ಮಾಡಿರುವ ಆರೋಪ ಕೇಳಿ ತುಂಬಾ ಬೇಸರವಾಗುತ್ತಿದೆ. ಯಾಕೆಂದರೆ 7-8 ವರ್ಷಗಳಿಂದಲೂ ನನಗೆ ಅರ್ಜುನ್ ಸರ್ ಗೊತ್ತು. ಅವರ ಜೊತೆ ನಾನು ಒಂದು ತಮಿಳು ಸಿನಿಮಾ ಮಾಡಿದ್ದೇನೆ. ನಾನು ಆಗಷ್ಟೇ ಇಂಡಸ್ಟ್ರಿಗೆ ಬಂದು ಎರಡು ವರ್ಷ ಆಗಿತ್ತು ಅಷ್ಟೇ. ನನಗೆ ಏನು ಗೊತ್ತಿರಲಿಲ್ಲ. ತಮಿಳು ಟೀಂ ನನಗೆ ಹೊಸದಾಗಿತ್ತು” ಎಂದು ಹೇಳಿದ್ದಾರೆ.
ಅರ್ಜುನ್ ಸರ್ ನನ್ನ ಜೊತೆ ಕನ್ನಡದಲ್ಲಿ ಮಾತನಾಡುತ್ತಿದ್ದರು. ನನಗೆ ತುಂಬಾ ಕಂಫರ್ಟ್ ಕೊಡುತ್ತಿದ್ದರು. ಅವರು ನನಗೆ ಮತ್ತು ನಮ್ಮ ಅಮ್ಮನಿಗೆ ತುಂಬಾ ಸೆಕ್ಯೂರ್ ಕೊಡುತ್ತಿದ್ದರು. ಯಾಕಂದರೆ ಚೆನ್ನೈ ಅಷ್ಟೇ ಅಲ್ಲದೆ ಮಾರಿಷಸ್ ನಲ್ಲೂ ಸಿನಿಮಾ ಶೂಟಿಂಗ್ ಮಾಡಿದ್ವಿ. ಶೂಟಿಂಗ್ ಸ್ಪಾಟ್‍ಗೆ ಯಾರೇ ಹೆಣ್ಣು ಮಕ್ಕಳು ಬಂದರೂ ಕೂಡ ಅವರ ಬಳಿ ತುಂಬಾ ಗೌರವದಿಂದ ನಡೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.
ನಾನು ಅವರನ್ನು ಚಿಕ್ಕವಯಸ್ಸಿನಿಂದ ನೋಡಿಕೊಂಡು ಬೆಳೆದಿದ್ದೀನಿ. ಅವರ ಮೇಲೆ ನನಗೆ ತುಂಬಾ ಗೌರವವಿದೆ. ಅವರು ತುಂಬಾ ಒಳ್ಳೆಯ ಸಿನಿಮಾವನ್ನು ಕೊಟ್ಟಿದ್ದಾರೆ. ಅವರ ಜೊತೆ ವರ್ಕ್ ಮಾಡುವಾಗ ಅವರು ನಡೆದುಕೊಳ್ಳುತ್ತಿದ್ದ ರೀತಿ ಮತ್ತು ನಮ್ಮ ತಾಯಿಯನ್ನ ಅವರು ಗೌರವಿಸುತ್ತಿದ್ದ ರೀತಿ ನೋಡಿ ಅವರ ಮೇಲಿನ ಗೌರವ ಇನ್ನು ಹೆಚ್ಚಾಯಿತು. ಆದರೆ ಈಗ ಅವರ ಮೇಲೆ ಕೇಳಿಬರುತ್ತಿರುವ ಆರೋಪ ತುಂಬಾನೇ ಬೇಜಾರಾಗುತ್ತಿದೆ. ಹೀಗಾಗಿ ನಾನು ಸಂಪೂರ್ಣವಾಗಿ ಅರ್ಜುನ್ ಸರ್ಜಾ ಅವರಿಗೆ ಸಪೋರ್ಟ್ ಮಾಡುತ್ತಿದ್ದೇನೆ ಎಂದ್ರು.
ಎಂಟು ವರ್ಷದಿಂದ ಅವರ ಜೊತೆ ವರ್ಕ್ ಮಾಡುತ್ತಿದ್ದೇನೆ. ಇವತ್ತಿಗೂ ಆ ಸ್ನೇಹ ಹಾಗೆ ಇದೆ. ಈಗಲೂ ನಾನು, ಅಮ್ಮ ಎಲ್ಲೆ ಸಿಕ್ಕಿದರೂ ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಾರೆ. ಅವರ ಮೇಲಿನ ಗೌರವ, ಪ್ರೀತಿ ಹಾಗೆ ಇದೆ. ನಾನು ನೋಡಿರುವಾಗೆ ಇಂದಿಗೂ ಸುತ್ತಮುತ್ತಲಿನ ಜನರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಇದೆಲ್ಲಾ ಆಗಬಾರದಿತ್ತು ಅನ್ನಿಸುತ್ತದೆ ಎಂದು ಹರಿಪ್ರಿಯಾ ಅವರು ಬೇಸರದಿಂದ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv