ಸ್ಯಾಂಡಲ್ವುಡ್ ಬ್ಯೂಟಿ ಹರಿಪ್ರಿಯಾ (Haripriya) ಇದೀಗ ಮದುವೆಯ ಬಳಿಕ ಲಾಯರ್ ಗೆಟಪ್ನಲ್ಲಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸಿಂಪಲ್ ಲುಕ್ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಾಹಿನಿಯ ಪ್ರೋಮೋ ಈಗ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಕಪ್ಪು ಕೋಟ್ ಹಾಕಿಕೊಂಡು ಕೈಯಲ್ಲಿ ಫೈಲ್ಗಳನ್ನು ಹಿಡಿದು ಬಂದ ಹರಿಪ್ರಿಯಾ ಅಹನ ಅಗ್ನಿಹೋತ್ರ ಎಂಬ ಪಾತ್ರದ ಮೂಲಕ ಕಿರುತೆರೆ ಬರುತ್ತಿದ್ದಾರೆ. ಯಾವ ಸೀರಿಯಲ್, ಯಾವಾಗ ಶುರುವಾಗಲಿದೆ ಎನ್ನುವ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ. ವಿಶೇಷ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಎದೆಯ ಮೇಲೆ ಫ್ಯಾನ್ ಹಾಕಿಕೊಂಡು ಎಂಟ್ರಿ ಕೊಟ್ಟ ಉರ್ಫಿ
ಕಳೆದ ವರ್ಷ ಪತಿ ವಸಿಷ್ಠ ಸಿಂಹ ಮತ್ತು ದಿಗಂತ್ ಜೊತೆ ‘ಯದಾ ಯದಾ ಹಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದರು. ಆದರೆ ಮದುವೆಯ ಬಳಿಕ ಈಗ ಕಿರುತೆರೆಗೆ ಫಸ್ಟ್ ಟೈಮ್ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದು, ರಿಲೀಸ್ ಆಗಿರುವ ಮೊದಲ ಪ್ರೋಮೋಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಜನವರಿ 26, 2023ರಂದು ವಸಿಷ್ಠ ಸಿಂಹ ಜೊತೆ ಹರಿಪ್ರಿಯಾ ಮದುವೆಯಾಗಿದ್ದಾರೆ. ವಸಿಷ್ಠ ಕನ್ನಡ ಸೇರಿದಂತೆ ಸೌತ್ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ.