ಮದುವೆಯಾದ್ಮೇಲೆ ದೇಹದ ಸರ್ಜರಿ ಮಾಡಿಸಿಕೊಂಡ್ರಾ ಎಂದವರಿಗೆ ಹನ್ಸಿಕಾ ಖಡಕ್ ಉತ್ತರ

Public TV
2 Min Read
hansika

ಸೌತ್ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟರು. ಸೊಹೈಲ್ (Sohail) ಜೊತೆ ಖುಷಿಯಾಗಿ ಸಂಸಾರ ಸಾಗಿಸುತ್ತಿರುವ ನಟಿ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಈ ನಡುವೆ ತೂಕ ಇಳಿಸಿಕೊಂಡಿರುವ ಹನ್ಸಿಕಾ ಬಗ್ಗೆ ಹೊಸ ಚರ್ಚೆವೊಂದು ಶುರುವಾಗಿದೆ. ಮದುವೆಯಾದ್ಮೇಲೆ ಸರ್ಜರಿ ಮಾಡಿಸಿಕೊಂಡ್ರಾ ಅಂತಾ ಹೊಸ ಕಥೆ ಶುರುವಾಗಿದೆ. ಈ ಕುರಿತು ನಟಿಯ ಇತ್ತೀಚಿನ ಫೋಟೋ ಟ್ರೋಲ್ ಕೂಡ ಆಗುತ್ತಿದೆ. ಇದನ್ನೂ ಓದಿ:ಮಗು ನನ್ನನ್ನೇ ಹೋಲುತ್ತಿದೆ: ಸಂಭ್ರಮ ಹಂಚಿಕೊಂಡ ನಟ ರಾಮ್ ಚರಣ್

hansika 1

ಚಿಕ್ಕ ವಯಸ್ಸಿನಲ್ಲೇ ನಟನೆಗೆ ಎಂಟ್ರಿ ಕೊಟ್ಟವರು ಹನ್ಸಿಕಾ ಮೋಟ್ವಾನಿ ಆಗಲೇ ಅವರ ಬಗ್ಗೆ ಒಂದು ಅಪಾದನೆ ಇತ್ತು. ಸಿನಿಮಾ ಅವಕಾಶಕ್ಕಾಗಿ ಯುವತಿಯಂತೆ ಕಾಣಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ರು ಎಂದು ಹೇಳಲಾಗಿತ್ತು. ಈಗ ಮದುವೆಯಾಗಿ ಸಂಸಾರ ಸಾಗರದಲ್ಲಿ ಬ್ಯುಸಿಯಿರುವ ನಟಿ ಬಗ್ಗೆ ಹೊಸ ವಿಷ್ಯವೊಂದು ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ. ಮದುವೆಯಾದ್ಮೇಲೆ ಇಷ್ಟು ಫಿಟ್ ಆಗಲು ದೇಹದ ಸರ್ಜರಿ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

hansika 1

ಮದುವೆಯಾದ ಮೇಲೆ ಈಕೆ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ೩೧ ವರ್ಷದ ಹನ್ಸಿಕಾ ಮೋಟ್ವಾನಿ ಈ ಫೋಟೋಗಳಲ್ಲಿ ಸ್ಲಿಮ್ ಆಗಿ ಕಾಣಿಸುವ ಹಿಂದೆ ಏನಪ್ಪಾ ಸೀಕ್ರೇಟ್ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಬಾಲ್ಯದಿಂದಲೂ ಸರ್ಜರಿ ಅದೂ ಇದೂ ಎಂದೆಲ್ಲಾ ಟ್ರೋಲ್ ಆಗಿದ್ದ ನಟಿಗೆ ಈಗಲೂ ಅದನ್ನೇ ಜನರು ಪ್ರಶ್ನಿಸುತ್ತಿದ್ದಾರೆ. ಮದುವೆಯಾದ ಮೇಲೆ ಈಕೆ ತಮ್ಮ ದೇಹಕ ಬಹುತೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಗುಸುಗುಸು ಶುರುವಾಗಿದೆ. ಈಕೆಗೂ ನೇರವಾಗಿ ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇದಕ್ಕೆ ಈಗ ಉತ್ತರಿಸಿರುವ ಹನ್ಸಿಕಾ, ಯೋಗ, ಧ್ಯಾನದ ಮೂಲಕ ತಮ್ಮ ತೂಕ ಇಳಿಸಿಕೊಂಡಿರುವುದಾಗಿ ಪರೋಕ್ಷವಾಗಿ ಫೋಟೋ ಶೇರ್ ಮಾಡುವ ಮೂಲಕ ಹೇಳಿದ್ದಾರೆ. ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನದಂದು ಕೆಲವೊಂದು ಯೋಗ ಭಂಗಿಗಳ ಫೋಟೋಗಳನ್ನು ಶೇರ್ ಮಾಡಿರುವ ಅವರು, ಯೋಗ ದಿನವನ್ನು ಆಚರಿಸುತ್ತಿದ್ದೇನೆ, ಇಂದು ಹಾಗೂ ಪ್ರತಿದಿನ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಸಣ್ಣಗಾಗಲು ಯೋಗ-ಧ್ಯಾನದ ಮೊರೆ ಹೋಗುತ್ತಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ. ಆದರೆ ಹನ್ಸಿಕಾ ಪೋಸ್ಟ್ಗೆ ಈಗಲೂ ಕೆಲವರು ಸಮ್ಮತಿ ಸೂಚಿಸುತ್ತಿಲ್ಲ. ಮದುವೆ ನಂತರ ಹನ್ಸಿಕಾ ಸರ್ಜರಿ ಮೂಲಕ ಇಡೀ ದೇಹವನ್ನು ಬದಲಿಸಿಕೊಂಡಿದ್ದು, ಯೋಗ ಮಾಡುವ ಡ್ರಾಮಾ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ. ಇನ್ನು ಹಲವರು, ಇದು ನಿಜ ಯೋಗ, ಧ್ಯಾನದ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು ಮಾತ್ರವಲ್ಲದೆ ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದಿದ್ದಾರೆ.

Share This Article