ಬಿಗ್ ಬಾಸ್ ಶೋ (Bigg Boss Kannada) ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಜೋಡಿ ದಿವ್ಯಾ-ಅರವಿಂದ್ ಕೆ.ಪಿ (Aravind Kp) ಅವರ ಪ್ರೀತಿಗೆ ಇದೀಗ 2 ವರ್ಷಗಳ ಸಂಭ್ರಮವಾಗಿದ್ದು, ಸ್ಪೆಷಲ್ ವೀಡಿಯೋವನ್ನ ನಟಿ ದಿವ್ಯಾ ಉರುಡುಗ (Divya Uruduga) ಇದೀಗ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್‌ನಲ್ಲಿ ಮೊದಲು ದಿವ್ಯಾ- ಮತ್ತು ಅರವಿಂದ್ ಭೇಟಿಯಾಗಿದ್ದರು. ಇದೀಗ ಇವರಿಬ್ಬರ ಪ್ರೀತಿ ಅನುಬಂಧಕ್ಕೆ 2 ವರ್ಷವಾಗಿದೆ. ಈ ಕುರಿತ ಸ್ಪೆಷಲ್ ವೀಡಿಯೋವನ್ನ ಹಂಚಿಕೊಂಡು ಅಭಿಮಾನಿಗಳಿಗೆ ದಿವ್ಯಾ-ಅರವಿಂದ್ ಜೋಡಿ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: `ಸೀತಾ ರಾಮಂ’ ನಾಯಕಿಗೆ ಮದುವೆ ಪ್ರಪೋಸಲ್, ಖಡಕ್ ಉತ್ತರ ಕೊಟ್ಟ ನಟಿ
View this post on Instagram
ಬಿಗ್ ಬಾಸ್ ಶೋನ ಸುಂದರ ಕ್ಷಣಗಳನ್ನ ಹೊಂದಿರುವ ಈ ವೀಡಿಯೋ ಇದೀಗ ಅಭಿಮಾನಿಗಳ ಮನಗೆದ್ದಿದೆ. ಇನ್ನೂ ಆದಷ್ಟು ಬೇಗ ಮದುವೆಯ ಬಗ್ಗೆ ಗುಡ್ ನ್ಯೂಸ್ ಕೊಡಿ ಎಂದು ಕಾಮೆಂಟ್ ಮೂಲಕ ಫ್ಯಾನ್ಸ್ ಮನವಿ ಮಾಡಿದ್ದಾರೆ.


