ಮುದ್ದಾದ ಮಗುವಿನ ಫೋಟೋ ಹಂಚಿಕೊಂಡ ದಿವ್ಯಾ ಶ್ರೀಧರ್

Public TV
1 Min Read
divya shridhar 1

‘ಆಕಾಶದೀಪ’ (Akashadeepa) ಸೀರಿಯಲ್ ನಾಯಕಿ ದಿವ್ಯಾ ಶ್ರೀಧರ್ (Divya Shridhar) ಅವರು ಪತಿ ಅರ್ನವ್ (Arnav) ಕಿರುಕುಳ ವಿರುದ್ಧ ತಿರುಗಿ ಬಿದ್ದಿದ್ದರು. ಕಳೆದ ವರ್ಷ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಅರ್ನವ್‌ನ ಬಂಧಿಸಿದ್ದರು. ಎರಡು ದಿನಗಳ ಹಿಂದೆ ನಟಿ ದಿವ್ಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಮುದ್ದಾದ ಮಗಳ ಫೋಟೋ ಹಂಚಿಕೊಂಡಿದ್ದಾರೆ.

DIVYA SHRIDHAR.1png

ಪ್ರೀತಿಸಿ ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಕಿರುತೆರೆ ನಟ ಅರ್ನವ್ ಬಂಧನವಾಗಿತ್ತು. ಕಳೆದ ವರ್ಷ ಈ ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು. ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಮಗಳ ಆಗಮನದ ಖುಷಿಯಲ್ಲಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾಯಿತು ‘ಕರ್ಣನ್’ ಜೋಡಿ: ಧನುಷ್ ಚಿತ್ರಕ್ಕೆ ಮಾರಿ ಸೆಲ್ವರಾಜ್ ಡೈರೆಕ್ಟರ್

divya shridhar

ನನ್ನ ಮುದ್ದು ಕಂದ ಲವ್ ಯೂ ಡಾರ್ಲಿಂಗ್ ಎಂದು ಮಗಳ ಆಗಮನದ ಬಗ್ಗೆ ನಟಿ ಹೇಳಿಕೊಂಡಿದ್ದರು. ಈ ಬೆನ್ನಲ್ಲೇ ಮುದ್ದಾದ ಮಗಳ ಮುಖವನ್ನ ರಿವೀಲ್ ಮಾಡಿದ್ದಾರೆ. ಪುಟ್ಟ ದೇವತೆ ಸ್ವಾಗತ ಎಂದು ಅಡಿಬರಹ ನೀಡಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾಯಿತು ‘ಕರ್ಣನ್’ ಜೋಡಿ: ಧನುಷ್ ಚಿತ್ರಕ್ಕೆ ಮಾರಿ ಸೆಲ್ವರಾಜ್ ಡೈರೆಕ್ಟರ್

ಆಕಾಶದೀಪ, ಕಣ್ಮಣಿ ಸೀರಿಯಲ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೇವಂತಿ ಧಾರಾವಾಹಿ ಮೂಲಕ ತಮಿಳು ಕಿರುತೆರೆಗೆ ದಿವ್ಯಾ ಶ್ರೀಧರ್ ಕಾಲಿಟ್ಟರು.

Share This Article