ಬ್ರೇಕಪ್ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಟೈಗರ್ ಶ್ರಾಫ್- ದಿಶಾ ಪಟಾನಿ ಜೋಡಿ

Public TV
1 Min Read
disha patani 1

ಬಾಲಿವುಡ್‌ನ(Bollywood) ಪ್ರೇಮ ಪಕ್ಷಿಗಳಾಗಿದ್ದ ಟೈಗರ್ ಶ್ರಾಫ್- ದಿಶಾ ಪಟಾನಿ (DishaPatani) ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಈ ಬಗ್ಗೆ ಲವ್, ಬ್ರೇಕಪ್ ಬಗ್ಗೆ ಯಾವುದಕ್ಕೂ ಈ ಜೋಡಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಇಬ್ಬರೂ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

tiger shroff

‘ಭಾಘಿ 2’ ಮತ್ತು ‘ಭಾಘಿ 3’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ಟೈಗರ್ ಶ್ರಾಫ್ (Tiger Shroff)- ದಿಶಾ ಪಟಾನಿ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಸ್ಟಾರ್ ಕಿಡ್ಸ್ ಮತ್ತು ಸ್ಟಾರ್ ನಟ-ನಟಿಯರು ಆಗಿರೋ ಕಾರಣ ಈ ಜೋಡಿ ಮದುವೆ ಮಾಡಿಕೊಳ್ತಾರಾ ಎಂಬ ಬಗ್ಗೆ ಕುತೂಹಲವಿತ್ತು. ಆದರೆ ಕಳೆದ ವರ್ಷ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ರು. ಬಳಿಕ ಇಬ್ಬರೂ ಎಲ್ಲೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಬ್ರೇಕಪ್ ಸುದ್ದಿಗೆ ಇದು ಮತ್ತಷ್ಟು ಪುಷ್ಟಿ ನೀಡಿತ್ತು. ಇದನ್ನೂ ಓದಿ:ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

disha patani 1 1

ಇದೀಗ ಮುಂಬೈ ಟು ದೆಹಲಿ ಬರೋದ್ದಕ್ಕೆ ಒಟ್ಟಿಗೆ ಟೈಗರ್, ದಿಶಾ ಟ್ರಾವೆಲ್ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಜೊತೆಯಾಗಿ ಕುಳಿತು ಮಾತನಾಡುತ್ತಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈವೆಂಟ್‌ನಲ್ಲಿ ದಿಶಾ ಮತ್ತು ಟೈಗರ್ ಶ್ರಾಫ್ ಇಬ್ಬರು ಅಕ್ಕ-ಪಕ್ಕದಲ್ಲಿ ಕುಳಿತಿದ್ದರು. ಇವರ ಜೊತೆ ಟೈಗರ್ ಶ್ರಾಫ್ ಸಹೋದರಿ ಕೃಷ್ಣಾ ಶ್ರಾಫ್, ತಾಯಿ ಆಯೇಶಾ ಶ್ರಾಫ್ ಕೂಡ ದಿಶಾ ಪಕ್ಕದಲ್ಲಿ ಕುಳಿತಿದ್ದರು.

ಟೈಗರ್ ಶ್ರಾಫ್- ದಿಶಾ ಪಟಾನಿ ಬೇರೆ ಬೇರೇ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಾರಾ.? ಜೊತೆಗೆ ಬಾಲಿವುಡ್‌ನ ಸಾಲು ಸಾಲು ಜೋಡಿಗಳು ಹಸೆಮಣೆ ಏರಿದ್ದರು. ಸಿದ್-ಕಿಯಾರಾ, ರಾಹುಲ್- ಅಥಿಯಾ ಶೆಟ್ಟಿ, ಅದೇ ಸಾಲಿಗೆ ಈ ಜೋಡಿ ಸೇರುತ್ತಾರಾ? ಮದುವೆ ಬಗ್ಗೆ ಸ್ವೀಟ್ ನ್ಯೂಸ್ ಕೊಡುತ್ತಾರಾ ಕಾಯಬೇಕಿದೆ.

Share This Article