ನಟಿ ಧನಶ್ರೀ ವರ್ಮಾ (Dhanashree Verma) ಅವರು ಮೊದಲ ಬಾರಿಗೆ ಯಜುವೇಂದ್ರ ಚಹಲ್ (Yuzvendra Chahal) ಜೊತೆಗಿನ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಬಳಿಕ ತಮಗಾದ ಕೆಟ್ಟ ಟ್ರೋಲ್ ಹಾಗೂ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಹಣ, ಅಧಿಕಾರದ ಸುತ್ತ ‘ಕುಬೇರ’- ಟೀಸರ್‌ನಲ್ಲಿ ಮಿಂಚಿದ ಧನುಷ್, ರಶ್ಮಿಕಾ
ಸಂದರ್ಶನವೊಂದರಲ್ಲಿ ಧನಶ್ರೀ ಮಾತನಾಡಿ, ಟ್ರೋಲ್ ಹಾಗೂ ಕೆಟ್ಟ ಕಾಮೆಂಟ್‌ಗಳ ಬಗ್ಗೆ ನಾನು ಎಂದಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ನನ್ನ ಗಮನ ಯಾವಾಗಲೂ ಕೆಲಸದ ಮೇಲೆಯೇ ಇರುತ್ತದೆ. ವೃತ್ತಿಪರವಾಗಿ ನನ್ನ ಗುರಿಯೇನು ಎಂಬುದರ ಬಗ್ಗೆ ಅರಿವಿದೆ. ನಾನು ಅದರ ಕಡೆ ಗಮನ ಹರಿಸುತ್ತಿದ್ದೇನೆ. ನಾನು ಮಾನಸಿಕವಾಗಿ ಸ್ಟ್ರಾಂಗ್ ಆಗಿರೋದ್ರಿಂದ ನೆಗೆಟಿವ್ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಬೆಳವಣಿಗೆಗೆ ಸಹಾಯವಾಗ ವಿಚಾರಗಳಿಂದ ತಾವು ದೂರವಿರೋದಾಗಿ ನಟಿ ಹೇಳಿದ್ದಾರೆ. ಇದನ್ನೂ ಓದಿ:ಮ್ಯಾನೇಜರ್ ಮೇಲೆ ಹಲ್ಲೆ- ನಟ ಉನ್ನಿ ಮುಕುಂದನ್ ವಿರುದ್ಧ ಕೇಸ್
ಯಜುವೇಂದ್ರ ಚಹಲ್ ಜೊತೆ ನಟಿ ಪ್ರೀತಿಸಿ 2020ರಲ್ಲಿ ಮದುವೆಯಾದರು. ಈ ವರ್ಷ ಮಾರ್ಚ್ 20ರಂದು ಡಿವೋರ್ಸ್ ಪಡೆದರು.
ಪ್ರಸ್ತುತ ಧನಶ್ರೀ ಅವರು ಟಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾವೊಂದರಲ್ಲಿ ಐಟಂ ಡ್ಯಾನ್ಸ್ ಸೇರಿದಂತೆ ಆಲ್ಬಂ ಸಾಂಗ್‌ಗಳಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.