ವಾರದಲ್ಲಿ 90 ಗಂಟೆ ಕೆಲಸ ಮಾಡಿ, ಭಾನುವಾರದ ರಜೆಯನ್ನು ತ್ಯಜಿಸಿ ಎಂದ L&T ಕಂಪನಿ ಮುಖ್ಯಸ್ಥ ಎಸ್.ಎನ್ ಸುಬ್ರಹ್ಮಣ್ಯನ್ (SN Subrahmanyan) ಹೇಳಿಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್.ಎನ್ ಸುಬ್ರಹ್ಮಣ್ಯನ್ ನೀಡಿರುವ ಹೇಳಿಕೆಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಅಡ್ಡದಾರಿಯಲ್ಲಿ ನಡೆಯುವ ಬದಲು ಮೌಲ್ಯಗಳಿಗೆ ಬದ್ಧನಾಗಿರುತ್ತೇನೆ – ಡಿವೋರ್ಸ್ ವದಂತಿ ಬಗ್ಗೆ ಚಾಹಲ್ ಫಸ್ಟ್ ರಿಯಾಕ್ಷನ್
ಸಭೆವೊಂದರಲ್ಲಿ ಎಸ್.ಎನ್ ಸುಬ್ರಹ್ಮಣ್ಯನ್ ಮಾತನಾಡಿ, ನೌಕರರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ವಾರ ಪೂರ್ತಿ ಕೆಲಸ ಮಾಡುವ ಮೂಲಕ ತಾವು ಉನ್ನತ ಹುದ್ದೆಯನ್ನು ಅಲಂಕರಿಸಲು ಶ್ರಮಿಸಬೇಕು. ಜೊತೆಗೆ ಭಾನುವಾರವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡಿದರೆ ಉತ್ತಮ ಎಂದಿದ್ದಾರೆ. ಅವರ ಈ ಮಾತು ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದಕ್ಕೆ ದೀಪಿಕಾ ಪಡುಕೋಣೆ (Deepika Padukone) ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ದೀಪಿಕಾ, ಇಂತಹ ಹಿರಿಯ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದು ಶಾಕಿಂಗ್ ವಿಚಾರ. ಮಾನಸಿಕ ಆರೋಗ್ಯವು ಬಹಳ ಮುಖ್ಯ ಎಂದಿದ್ದಾರೆ. ಮತ್ತೆ 2ನೇ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ L&T ಮುಖ್ಯಸ್ಥರ ಹೇಳಿಕೆಯನ್ನು ಹಂಚಿಕೊಂಡು ಅವರು ‘ಇನ್ನಷ್ಟು ಕೆಟ್ಟದಾಗಿ ಮಾಡಿದ್ದಾರೆ’ ಎಂದು ನಟಿ ಅಸಮಾಧಾನ ಹೊರಹಾಕಿದ್ದಾರೆ. ದೀಪಿಕಾ ರಿಯಾಕ್ಷನ್ ನಂತರ ಮತ್ತಷ್ಟು ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.