ನಾಳೆ ನಟಿ ದೀಪಿಕಾ ದಾಸ್ ಆರತಕ್ಷತೆ, ಬೀಗರೂಟ: ಆಪ್ತರಿಗೆ ಆಹ್ವಾನ

Public TV
1 Min Read
Deepika Das 3

ಮಾರ್ಚ್ 1 ರಂದು ಮದುವೆ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ (Deepika Das). ಮದುವೆ ಸ್ಥಳ, ಭಾಗಿಯಾದವರು ಯಾರೆಲ್ಲ, ಕನ್ನಡದ ಯಾವ ನಟ ನಟಿಯರು ಇವರ ಮದುವೆಯಲ್ಲಿ ಭಾಗಿಯಾಗಿದ್ದರು ಇತ್ಯಾದಿ ವಿಷಯ ಗೌಪ್ಯವಾಗಿಯೇ ಉಳಿದಿತ್ತು. ಗುಪ್ತವಾಗಿಯೇ ಮದುವೆ ಆಗಿದ್ದ ದೀಪಿಕಾ ದಾಸ್, ಆರತಕ್ಷತೆ ಮಾಡಿಕೊಳ್ಳುವುದಿಲ್ಲವಾ ಎನ್ನುವ ಪ್ರಶ್ನೆಯನ್ನೇ ಅಭಿಮಾನಿಗಳು  ಕೇಳಿದ್ದರು. ಇದೀಗ ಆಪ್ತರಿಗಾಗಿ ಆರತಕ್ಷತೆಯನ್ನು ಏರ್ಪಡಿಸಲಾಗಿದೆ.

deepika das 1 1

ನಾಳೆ (ಮಾ.10) ರಂದು ಬೆಂಗಳೂರು ರೆಸಾರ್ಟ್ ವೊಂದರಲ್ಲಿ ಆರತಕ್ಷತೆ (Reception) ಮತ್ತು ಬೀಗರೂಟವನ್ನು ದೀಪಿಕಾ ಆಯೋಜನೆ ಮಾಡಿದ್ದಾರೆ. ತಮ್ಮ ಆಪ್ತರಿಗೆ ಹಾಗೂ ಸಿನಿಮಾ ಮತ್ತು ಕಿರುತೆರೆಯ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದಾರೆ. ನಾಳೆ ಮಧ್ಯಾಹ್ನ 12.30ಕ್ಕೆ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.

deepika das

ದೀಪಿಕಾ ಮದುವೆಯ (Wedding) ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದರು. ಜೊತೆಗೆ ಹುಡುಗನ ಬಗ್ಗೆ ಯಾವುದೇ ಮಾಹಿತಿಯನ್ನೂ ಅವರು ಹಂಚಿಕೊಂಡಿರಲಿಲ್ಲ. ಮೊನ್ನೆಯಷ್ಟೇ ತನ್ನ ಕರಿಮಣಿ ಮಾಲೀಕನನ್ನು ನಟಿ ಪರಿಚಯಿಸಿದ್ದರು. ಪತಿಯ ಹೆಸರು ದೀಪಕ್ (Deepak) ಎಂದು ರಿವೀಲ್ ಮಾಡಿ ತಮ್ಮ ಮದುವೆಯ ಬಗ್ಗೆ ನಟಿ ಸಂತಸ ವ್ಯಕ್ತಪಡಿಸಿದ್ದರು.

deepika das

ಪದ್ಧತಿಯ ಬದ್ಧವಾಗಿ, ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನನ್ನ ಕನಸಾಗಿತ್ತು. ಇದೀಗ ಅದು ಈಡೇರಿದೆ ಎಂದು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ದಿಢೀರ್ ಅಂತ ಆಗಿದ ಮದುವೆ ಅಲ್ಲ. ಈ ಮದುವೆಗೆ ಹಲವು ದಿನಗಳಿಂದ ಪ್ಲ್ಯಾನ್ ಮಾಡಲಾಗಿತ್ತು. ಸರ್ಪ್ರೈಸ್‌ ಕೂಡ ಸ್ವೀಟ್ ಆಗಿದೆ. ನನಗೆ ನನ್ನ ಬಾಳ ಸಂಗಾತಿ ಸಿಕ್ಕಿದ್ದು, ಪಕ್ಕಾ ದೇಸಿ. ದಯವಿಟ್ಟು ನಮ್ಮ ಗೌಪ್ಯತೆಯನ್ನು ಗೌರವಿಸಿ’ ಎಂದು ದೀಪಿಕಾ ದಾಸ್ ಮನವಿ ಮಾಡಿದ್ದರು.

 

ʻನಾಗಿಣಿ’ ಸೀರಿಯಲ್ ಬಿಗ್ ಬಾಸ್ ಸೀಸನ್ 7ರ ಮೂಲಕ ಮೋಡಿ ಮಾಡಿರುವ ನಟಿ ದೀಪಿಕಾ ದಾಸ್ ಅವರು ಗೋವಾದಲ್ಲಿ (Goa) ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ. ಗೋವಾದ ಕಡಲ ತೀರದಲ್ಲಿ ಕರ್ನಾಟಕ ಮೂಲದ ದುಬೈ ಉದ್ಯಮಿ ದೀಪಕ್‌ರನ್ನು ನಟಿ ಮದುವೆ ಆಗಿದ್ದಾರೆ. ಮಾರ್ಚ್ 1ರಂದು ನಡೆದ ದೀಪಿಕಾ ಮದುವೆಯಲ್ಲಿ ಎರಡು ಕುಟುಂಬದ ಸದಸ್ಯರು, ಆಪ್ತರಷ್ಟೇ ಭಾಗಿದ್ದರು.

Share This Article