ಬಿಗ್ ಬಾಸ್ ಮನೆಯಲ್ಲಿ (Bigg Boss House) ತಮ್ಮದೇ ಶೈಲಿಯಲ್ಲಿ ದೀಪಿಕಾ ದಾಸ್ (Deepika Das) ಗುರುತಿಸಿಕೊಂಡವರು. ಇದೀಗ ವೆಕೇಷನ್ಸ್ಗಾಗಿ ನಟಿ ದುಬೈಗೆ ಹಾರಿದ್ದಾರೆ. ಈ ವೇಳೆ ವಿದೇಶದಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ (Chris Gayle) ಅವರನ್ನ ಮೀಟ್ ಮಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾಗಿಣಿ, ಬಿಗ್ ಬಾಸ್ ಶೋ (Bigg Boss) ಮೂಲಕ ಮೋಡಿ ಮಾಡಿರುವ ನಟಿ ದೀಪಿಕಾ ದಾಸ್ ಸದ್ಯ ದುಬೈನಲ್ಲಿದ್ದಾರೆ. ಫ್ರೆಂಡ್ಸ್ ಜೊತೆ ಮೋಜು- ಮಸ್ತಿ ಮಾಡ್ತಿದ್ದಾರೆ. ಶೂಟಿಂಗ್ಗೆ ಬ್ರೇಕ್ ಹಾಕಿ, ವಿದೇಶ ಪ್ರವಾಸದಲ್ಲಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್: ಫೋಟೋ ಲೀಕ್
View this post on Instagram
ವಿದೇಶದಲ್ಲಿ ಇದೀಗ ಕ್ರಿಕೆಟಿಗ ಕ್ರಿಸ್ ಗೇಲ್ ಅವರನ್ನು ದೀಪಿಕಾ ದಾಸ್ ಭೇಟಿಯಾಗಿದ್ದಾರೆ. ಇಬ್ಬರು ಜೊತೆಯಿರುವ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಕನ್ನಡಿಗರಿಗೆ ಕ್ರಿಸ್ ಗೇಲ್ ಎಂದರೆ ಇಷ್ಟ. ಆರ್ಸಿಬಿ ತಂಡದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ನಟಿ ದೀಪಿಕಾ ದಾಸ್ ಕೂಡ ಕ್ರಿಸ್ ಗೇಲ್ ಅವರಿಗೆ ದೊಡ್ಡ ಅಭಿಮಾನಿಯಾಗಿದ್ದು, ಈ ಕುರಿತು ಪೋಸ್ಟ್ನಲ್ಲಿ ಅವರೇ ಹೇಳಿಕೊಂಡಿದ್ದಾರೆ.
View this post on Instagram
ಇದು ಅನಿರೀಕ್ಷಿತ ಭೇಟಿ ಎಂದು ಕ್ರಿಸ್ ಗೇಲ್ ಜೊತೆಗಿರುವ ಫೋಟೋವನ್ನ ದೀಪಿಕಾ ದಾಸ್ ಶೇರ್ ಮಾಡಿದ್ದು, ಈಗ ಸಖತ್ ವೈರಲ್ ಆಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k