ಸ್ಯಾಂಡಲ್ವುಡ್ ಚಿಟ್ಟೆ ಛಾಯಾ ಸಿಂಗ್ (Chaya Singh) ಅವರು ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಪ್ರಸ್ತುತ ‘ಅಮೃತಧಾರೆ’ (Amruthadaare) ಸೀರಿಯಲ್ ನಾಯಕಿಯಾಗಿ ಕಿರುತೆರೆಯಲ್ಲಿ ಹೊಸ ಪರ್ವ ಆರಂಭಿಸಿದ್ದಾರೆ. ಈ ನಡುವೆ ‘ಭೈರತಿ ರಣಗಲ್’ (Bhairathi Rangal) ಚಿತ್ರದಲ್ಲಿ ಛಾಯಾ ಸಿಂಗ್ ನಟಿಸುತ್ತಾರಾ.? ಶಿವಣ್ಣ ಜೊತೆ ಮತ್ತೆ ಕಾಣಿಸಿಕೊಳ್ತಾರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ನಟಿ ಛಾಯಾ ಸಿಂಗ್ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.
2017ರಲ್ಲಿ ‘ಮಫ್ತಿ’ (Mufti) ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನರ್ತನ್ ನಿರ್ದೇಶನದಲ್ಲಿ ಶಿವಣ್ಣ ಅಬ್ಬರಿಸಿದ್ದರು. ಇದೇ ಸಿನಿಮಾದಲ್ಲಿ ಶಿವಣ್ಣಗೆ ತಂಗಿಯಾಗಿ ಛಾಯಾ ಜೀವತುಂಬಿದ್ದರು. ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಿದ್ದ ನಟಿ ಈ ಹಿಂದೆ ರೌಡಿ ಅಳಿಯ ಚಿತ್ರದಲ್ಲಿ ಶಿವಣ್ಣ ಜೊತೆ ನಟಿಸಿದ್ದರು. ಇದಾದ ನಂತರ 10 ವರ್ಷ ಕನ್ನಡ ಸಿನಿಮಾಗಳಿಂದ ದೂರವಿದ್ದರು. ಇದನ್ನೂ ಓದಿ:ಸುದೀಪ್ ನಟನೆಯ 46ನೇ ಸಿನಿಮಾ: ಇನ್ನಷ್ಟು, ಮತ್ತಷ್ಟು ಸುದ್ದಿ
ಬಳಿಕ ಶಿವಣ್ಣ ಅವರ ಒತ್ತಾಯಕ್ಕೆ ಮಣಿದು 10 ವರ್ಷಗಳ ನಂತರ ಮಫ್ತಿ ಚಿತ್ರದಲ್ಲಿ ಶಿವರಾಜ್‌ಕುಮಾರ್ ಛಾಯಾ ಸಿಂಗ್ ಕೂಡ ಪ್ರಮುಖ ಪಾತ್ರ ಮಾಡ್ತಾರೆ. ಇದೀಗ ‘ಮಫ್ತಿ’ ಪ್ರೀಕ್ವೆಲ್ ಆಗಿರೋ ‘ಭೈರತಿ ರಣಗಲ್’ (Bharathi Rangal) ಸಿನಿಮಾಗೆ ಈಗ ಚಾಲನೆ ಸಿಕ್ಕಿದೆ. ಈ ಭಾಗದಲ್ಲೂ ನಟಿ ಛಾಯಾ ಸಿಂಗ್ ಆಕ್ಟ್ ಮಾಡ್ತಿದ್ದಾರೆ. ಈ ಕುರಿತು ನಟಿ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ. ಶಿವಣ್ಣ ಜೊತೆ ಮತ್ತೆ ಸ್ಕ್ರೀನ್ ಶೇರ್ ಮಾಡೋದಾಗಿ ಖುಷಿಯಿಂದ ಹೇಳಿಕೊಂಡಿದ್ದಾರೆ.
‘ಭೈರತಿ ರಣಗಲ್’ ಚಿತ್ರದಲ್ಲಿ ಶಿವಣ್ಣಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ತಿದ್ದಾರೆ. ಮುಂದಿನ ವಾರದಿಂದ ಶೂಟಿಂಗ್ ಶುರುವಾಗಲಿದೆ. ಛಾಯಾ ಸಿಂಗ್ ಅವರ ಭಾಗದ ಚಿತ್ರೀಕರಣ ಮುಂದಿನ ತಿಂಗಳು ಜುಲೈನಿಂದ ಶುರುವಾಗಲಿದೆ ಎಂದು ತಿಳಿಸಿದ್ದಾರೆ.
ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್ ಟಿವಿ ಡಿಜಿಟಲ್