ಅಪ್ಸರೆ ಚೈತ್ರಾ ಬ್ಯೂಟಿಗೆ ವಾವ್ ಎಂದ ಫ್ಯಾನ್ಸ್

Public TV
1 Min Read
chaithra achar

ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ (Chaithra Achar) ಸದಾ ಒಂದಲ್ಲಾ ಒಂದು ಶೈಲಿಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಬಿಳಿ ಬಣ್ಣದ ಉಡುಗೆಯಲ್ಲಿ ‘ಟೋಬಿ’ (Toby) ಬ್ಯೂಟಿ ಚೈತ್ರಾ ಆಚಾರ್ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

chaithra achar 1

ಬಿಳಿ ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ‘ಟೋಬಿ’ ಸುಂದರಿ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮೆರಾ ಕಣ್ಣಿಗೆ ಬಗೆ ಬಗೆಯ ಪೋಸ್ ಕೊಡುತ್ತಾ ನಗು ಚೆಲ್ಲಿದ್ದಾರೆ. ನಟಿಯ ನಯಾ ಲುಕ್ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ:ಗೋವಾ ಚಿತ್ರೋತ್ಸವ: ಗಾಲಾ ಪ್ರೀಮಿಯರ್ ನಲ್ಲಿ ‘ಗ್ರೇ ಗೇಮ್ಸ್’ ಪ್ರದರ್ಶನ

chaithra

ಬೋಲ್ಡ್ & ಬ್ಯೂಟಿಫುಲ್ ನಟಿ ಚೈತ್ರಾ ಫೋಟೋಶೂಟ್‌ನಲ್ಲಿ ಅಷ್ಟೇ ಮಿಂಚೋದು ಅಲ್ಲ. ಹೊಸ ಬಗೆಯ ಪಾತ್ರಗಳ ಮೂಲಕ ಕೂಡ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಟೋಬಿ’ ಮತ್ತು ‘ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಚೈತ್ರಾ ಅವರ ಕೈಯಲ್ಲಿ ‘ಹ್ಯಾಪಿ ಬರ್ತ್‌ಡೇ ಟು ಮಿ’ ಮತ್ತು ಬ್ಲಿಂಕ್ ಸೇರಿದಂತೆ ಹಲವು ಸಿನಿಮಾಗಳಿವೆ. ನಟಿ ಮಾತ್ರವಲ್ಲ ಸಿಂಗರ್ ಆಗಿ ಮೋಡಿ ಮಾಡಿರುವ ಚೈತ್ರಾ, ಪಾತ್ರದ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ.

Share This Article