ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಭಾವನಾ ಮೆನನ್ (Bhavana Menon) ಜೋಡಿಯಾಗಿ ನಟಿಸಿರುವ ಟಗರು (Tagaru), ಭಜರಂಗಿ-2 (Bhajarangi 2) ಸಿನಿಮಾಗಳಿಗೆ ಅಪಾರ ಅಭಿಮಾನಿಗಳಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಅದ್ಯಾವಾಗ ಸಿನಿಮಾ ಬರಲಿದೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಹೊಸ ಚಿತ್ರಕ್ಕಾಗಿ ಶಿವಣ್ಣ ಮತ್ತು ಭಾವನಾ ಮತ್ತೆ ಜೋಡಿಯಾಗಿ ನಟಿಸಲಿದ್ದಾರೆ.
ಸದ್ಯ ‘ಜಾಕಿ’ ಭಾವನಾ ಕನ್ನಡದ ಜೊತೆಗೆ ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಹೊಸ ಸಿನಿಮಾದಲ್ಲಿ ನಟಿಸುವ ಬಗ್ಗೆ ಸ್ವತಃ ಸಂದರ್ಶನವೊಂದರಲ್ಲಿ ಭಾವನಾ ಮಾಹಿತಿ ನೀಡಿದ್ದಾರೆ. ಬಹುನಿರೀಕ್ಷಿತ ‘ಉತ್ತರಕಾಂಡ’ ಚಿತ್ರದಲ್ಲಿ ಶಿವಣ್ಣ ಜೊತೆ ತೆರೆಹಂಚಿಕೊಳ್ಳುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಸದ್ದಿಲ್ಲದೇ 2ನೇ ಚಿತ್ರದ ಶೂಟಿಂಗ್ ಮುಗಿಸಿದ ಆಮೀರ್ ಖಾನ್ ಪುತ್ರ
- Advertisement
- Advertisement
ಜನವರಿಯಲ್ಲಿ ‘ಉತ್ತರಕಾಂಡ’ (Uttarakaanda Film) ಚಿತ್ರದಲ್ಲಿ ಪಾತ್ರಕ್ಕಾಗಿ ತಮ್ಮ ಸಂಪರ್ಕಿಸಿರೋದಾಗಿ ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ಶೂಟಿಂಗ್ ಅಂದಿದ್ದರು. ನನ್ನ ಭಾಗದ ಚಿತ್ರೀಕರಣ ಮೇನಲ್ಲಿ ಶುರುವಾಗಲಿದೆ ಎಂದು ನಟಿ ಮಾಹಿತಿ ನೀಡಿದ್ದಾರೆ.
‘ಉತ್ತರಕಾಂಡ’ ಚಿತ್ರದಲ್ಲಿ ಶಿವರಾಜ್‌ಕುಮಾರ್ (Shivarajkumar) ಅವರ ಪತ್ನಿಯ ಪಾತ್ರದಲ್ಲಿ ಭಾವನಾ ನಟಿಸಿಲಿದ್ದಾರೆ ಎನ್ನಲಾಗುತ್ತಿದೆ. 20 ದಿನಗಳ ಶೂಟಿಂಗ್ ಇರಲಿದೆ ಭಾವನಾ ನಟಿಸಲಿರುವ ಪಾತ್ರದ ಶೂಟಿಂಗ್ ಇರಲಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಚಿತ್ರತಂಡದ ಕಡೆಯಿಂದ ಸಿಗುವವರೆಗೂ ಕಾಯಬೇಕಿದೆ.
ಶಿವಣ್ಣ ಮತ್ತು ಡಾಲಿ ನಟನೆಯ ಈ ಸಿನಿಮಾದ ಚಿತ್ರೀಕರಣ ಸದ್ಯ ಬಿಜಾಪುರದಲ್ಲಿ ಭರದಿಂದ ನಡೆಯುತ್ತಿದೆ. ಚೈತ್ರ ಆಚಾರ್, ದಿಗಂತ್, ಯೋಗರಾಜ್ ಭಟ್, ಮಲಯಾಳಂ ನಟ ವಿಜಯ್ ಬಾಬು ಸೇರಿದಂತೆ ಹಲವು ನಟಿಸುತ್ತಿದ್ದಾರೆ. ಸಿನಿಮಾಗೆ ಕೆಆರ್‌ಜಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ನಾಡಿಕಾರ್, ಡೋರ್ ಸೇರಿದಂತೆ ಹಲವು ಸಿನಿಮಾಗಳು ಭಾವನಾ ಮೆನನ್ ಕೈಯಲ್ಲಿವೆ. ಕನ್ನಡದ ಕೆಲವು ಸಿನಿಮಾಗಳಿಗೂ ನಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.